ಸುಳ್ಯ: ಸುಳ್ಯ ತಾಲೂಕಿನ ಏಕೈಕ ಹಾಗು ಪ್ರತಿಷ್ಠಿತ ಮಹಿಳಾ ಪದವಿ ಪೂರ್ವ ಕಾಲೇಜು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು. ಕಲಾ, ವಾಣೀಜ್ಯ, ವಿಜ್ಞಾನ, ಹೀಗೆ ಎಲ್ಲಾ ವಿಭಾಗಗಳಳಲ್ಲಿಯೂ ಶೇ.100 ಫಲಿತಾಂಶದ ಹಿರಿಮೆಯೊಂದಿಗೆ ಮುನ್ನಡೆದಿರುವ ಕಾಲೇಜಿನಲ್ಲಿ 2023-24ನೇ ಸಾಲಿನಲ್ಲಿ ದಾಖಲಾತಿ ಆರಂಭಗೊಂಡಿದೆ. ಗುಣಮಟ್ಟದ ಹಾಗು ಮೌಲ್ಯಯುತ ಶಿಕ್ಷಣ ನೀಡುವ ವಿದ್ಯಾಸಂಸ್ಥೆ ವಿದ್ಯಾರ್ಥಿನಿಯರನ್ನು ಕೈ ಬೀಸಿ ಕರೆಯುತಿದೆ. ದ.ಕ.ಗೌಡ ವಿದ್ಯಾ ಸಂಘದ ಪ್ರಾಯೋಜಕತ್ವದಲ್ಲಿ 1991 ಆರಂಭಗೊಂಡ ತಾಲೂಕಿನ ಪ್ರಥಮ ಹಾಗು ಏಕೈಕ
ಮಹಿಳಾ ಕಾಲೇಜು ಕಳೆದ 32 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆಯೆರೆದಿದೆ. ಕರ್ನಾಟಕ ಪ.ಪೂ. ಇಲಾಖೆಯ ‘ಎ’ ಗ್ರೇಡ್ ಮಾನ್ಯತೆಯನ್ನು ಪಡೆದಿರುವ ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲೀಷ್ ಬೋಧನಾ ಮಾಧ್ಯಮಗಳಾಗಿವೆ
ಸಂಯೋಜನೆಗಳು:
ಕಲಾ ವಿಭಾಗ: ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ
ವಾಣಿಜ್ಯ ವಿಭಾಗ :ಕನ್ನಡ, ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ
ವಿಜ್ಞಾನ ವಿಭಾಗ: ಕನ್ನಡ, ಇಂಗ್ಲೀಷ್, ಭೌತಶಾಸ್ತ್ರ ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ
ಕಾಲೇಜಿನ ಸೌಲಭ್ಯಗಳು :
ಉತ್ತಮ ತರಗತಿ ಕೊಠಡಿಗಳು,ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯಗಳು,
ಗ್ರಂಥಾಲಯ ಸೌಲಭ್ಯ,ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ವ್ಯವಸ್ಥಿತ ವಸತಿ ನಿಲಯ (ಹಾಸ್ಟೆಲ್), ಅನುಭವಿ ಅರ್ಹ ಉಪನ್ಯಾಸಕ ವೃಂದ,
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇಬ್ಬರು ವಿ ವಿದ್ಯಾರ್ಥಿನಿಯರಾದ ಶ್ರೀಫ ಮತ್ತು ತುಳಸಿ ರಾಷ್ಟ್ರೀಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ಗೆ ಆಯ್ಕೆಯಾಗಿದ್ದಾರೆ
ದತ್ತಿ ನಿಧಿ ಪುರಸ್ಕಾರ, ಮಧ್ಯಾಹ್ನ ಊಟದ ವ್ಯವಸ್ಥೆ, ಸಿಇಟಿ, ನೀಟ್ ತರಬೇತಿ, ಯೋಗ, ಧ್ಯಾನ,ಪ್ರಾಣಾಯಾಮ ಕಲಿಸಲಾಗುತ್ತದೆ.
ವಿಶೇಷ ತರಗತಿಗಳು:
ಪ್ರೌಢಶಾಲೆ ವಿಭಾಗದಲ್ಲಿ 8, 9 ತ್ತು 10ನೇ ತರಗತಿಯಿರುತ್ತದೆ. ಪಿ. ಯು. ಸಿ.ಯಲ್ಲಿ ಮೂರು ಸಂಯೋಜನೆಗಳಿರುತ್ತದೆ.
ವೇಳಾಪಟ್ಟಿಯಲ್ಲಿ ಬರುವ ತರಗತಿಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ಪಿ. ಯು. ಸಿ. ವಿಜ್ಞಾನ ವಿಭಾಗದವರಿಗೆ ವಿಶೇಷ ತರಗತಿಗಳು
ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಪೂರಕ ತರಗತಿಗಳು ಇಂಗ್ಲೀಷ್ ಭಾಷಾ ಜ್ಞಾನವನ್ನು ಹೆಚ್ಚಿಸಲು ಇಂಗ್ಲೀಷ್ ತರಬೇತಿ ತರಗತಿಗಳು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳು, ಕ್ರೀಡಾ ತರಬೇತಿಗಳನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಯಾಮಣಿ ಕೆ.
ಕಾಲೇಜು ನಡೆದು ಬಂದ ದಾರಿ:
ಸುಳ್ಯ ತಾಲೂಕಿನ ಏಕೈಕ ಮಹಿಳಾ ಸಂಸ್ಥೆಯಾದ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜು, ಮಂಗಳೂರು – ಮೈಸೂರು ರಾಜ್ಯ ಹೆದ್ದಾರಿಯ ಬದಿಯಲ್ಲಿದೆ. ಇದರ ಆಡಳಿತ ಮಂಡಳಿಯಾದ ದಕ್ಷಿಣ ಕನ್ನಡ ಗೌಡ ವಿದ್ಯಾಸಂಘವು 1921ರಲ್ಲಿ ಸ್ಥಾಪಿತಗೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಒದಗಿಸುತ್ತಿತ್ತು. “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಈ ಉಕ್ತಿಯಂತೆ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶವಾದ ಸುಳ್ಯದಲ್ಲಿ ದ. ಕ. ಗೌಡ ವಿದ್ಯಾ ಸಂಘದ ವತಿಯಿಂದ ಶ್ರೀ ಶಾರದಾ ಹಣ್ಮಕ್ಕಳ ಪ್ರೌಢಶಾಲೆಯು 1982ರಲ್ಲಿ ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ನೇತೃತ್ವದಲ್ಲಿ ಸ್ಥಾಪನೆಗೊಂಡಿತು.
ಮುಂದೆ 1987ರಲ್ಲಿ ಈ ಸಂಸ್ಥೆಯು ಸರಕಾರದ ಅನುದಾನ ಪಡೆಯಿತು. ತದನಂತರ ಡಾ. ಕುರುಂಜಿಯವರ ದೂರದೃಷ್ಟಿಯ ಫಲವಾಗಿ 1991ರಲ್ಲಿ ಪಿ. ಯು. ಸಿ. ಕಲಾ ವಿಭಾಗವನ್ನು ಪ್ರಾರಂಭಿಸುವುದರ ಮೂಲಕ ಪದವಿ ಪೂರ್ವ ಕಾಲೇಜಾಗಿ ಈ ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. 2001ರಲ್ಲಿ ಹೆಣ್ಣು ಮಕ್ಕಳಿಗೆ ವಿಜ್ಞಾನ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ವಿಜ್ಞಾನ ವಿಭಾಗವನ್ನು ಆರಂಭಿಸಲಾಯಿತು. ಇದರಲ್ಲಿ ಕಲಾ ವಿಭಾಗವು 2009ರಂದು ಸರಕಾರದ ಅನುದಾನವನ್ನು ಪಡೆದುಕೊಂಡಿರುತ್ತದೆ. 2010 – 11ರ ವರ್ಷದಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸುವುದರ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಅವಕಾಶವನ್ನು ಆಡಳಿತ ಮಂಡಳಿ ನೀಡಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ‘ಎ’ ಗ್ರೇಡ್ ಮಾನ್ಯತೆಯನ್ನು ಪಡೆದಂತಹ ಸಂಸ್ಥೆಯಾಗಿದ್ದು, ಪ್ರಾರಂಭದಿಂದ ಇಲ್ಲಿಯವರೆಗೂ ಅತ್ಯುತ್ತಮ ಫಲಿತಾಂಶವನ್ನು ಕಾಯ್ದುಕೊಂಡಿರುತ್ತದೆ.
ಸಂಸ್ಥೆಗೆ ಸುಳ್ಯದ ಹೆದ್ದಾರಿಯ ಬದಿಯಲ್ಲಿ ಸುಸಜ್ಜಿತ ಕಟ್ಟಡವಿದ್ದು ವಿದ್ಯಾರ್ಥಿನಿಯರಿಗೆ ಸಕಲ ಸೌಲಭ್ಯಗಳು ಇವೆ. ಪಿ. ಯು. ಸಿ. ವಿಜ್ಞಾನ ವಿಭಾಗಕ್ಕೆ ಪ್ರತ್ಯೇಕ ಪ್ರಯೋಗಶಾಲೆ ಇದ್ದು ಅತ್ಯುತ್ತಮ ಉಪನ್ಯಾಸಕ ವೃಂದವನ್ನು ಹೊಂದಿದ್ದು ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘವು ಸುಳ್ಯದಲ್ಲಿ ಶ್ರೀ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆ, ಶಾರದಾ ಮಹಿಳಾ ಪದವಿ ಕಾಲೇಜು ಮತ್ತು ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದೆ.
ದಾಖಲಾತಿಗಾಗಿ ಸಂಪರ್ಕಿಸಿ:
08257-230286
9481212588