ಸುಳ್ಯ:ಕೆವಿಜಿ ಡೆಂಟಲ್ ಕಾಲೆಜಿನ ವತಿಯಿಂದ ನಡೆಯುತ್ತಿರುವ ಡೆಂಟಲ್ ಪ್ರೀಮಿಯರ್ ಲೀಗ್ ಕ್ರಿಕೆಟ್(ಡಿ ಪಿ ಎಲ್) ಪಂದ್ಯಾಟ ಏ.28 ರಂದು ಉದ್ಘಾಟನೆಗೊಂಡಿತು. ಪ್ರೊ ಕಬಡ್ಡಿ ಆಟಗಾರ ಅಭಿಷೇಕ್ ಎಸ್ ಗೌಡ ಪಂದ್ಯಾಟವನ್ನು ಉದ್ಘಾಟಿಸಿದರು. ಡೆಂಟಲ್ ಕಾಲೇಜಿನ
ಪ್ರಾಂಶುಪಾಲರಾದ ಡಾ.ಮೋಕ್ಷಾ ನಾಯಕ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆವಿಜಿ ಡೆಂಟಲ್ ಕಾಲೇಜಿನ ಪಿ.ಜಿ. ಡೈರೆಕ್ಟರ್ ಶರತ್ ಕುಮಾರ್ ಶೆಟ್ಟಿ, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ
ಡಾ. ಕೃಷ್ಣ ಪ್ರಸಾದ್ ಡಾ. ಮನೋಜ್ ಅಡ್ಡಂತ್ತಡ್ಕ, ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎಂ.ಎಂ.ದಯಾಕರ, ಡಾ.ನುಸ್ರತ್ ಫರೀದ್, ಡಾ.ಜಯಪ್ರಸಾದ್ ಆನೆಕಾರ್, ಪ್ರಮುಖರಾದ ಪ್ರಸನ್ನ ಕಲ್ಲಾಜೆ, ಅರುಣ್ ಕುರುಂಜಿ, ಕಮಲಾಕ್ಷ ನಂಗಾರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಡೆಂಟಲ್ ಕಾಲೇಜಿನ ವತಿಯಿಂದ ಅಭಿಷೇಕ್ ಗೌಡ ಅವರನ್ನು ಸನ್ಮಾನಿಸಲಾಯಿತು.
ಡಾ. ರೇವಂತ್ ಸೂಂತೋಡು ಸ್ವಾಗತಿಸಿದರು. ಅನುಗ್ರಹ, ಅಂಜಲಿ ಪ್ರಾರ್ಥಸಿದರು. ಡಾ. ಅನುಪಮ. ಐಶ್ವರ್ಯ, ದಿಶಾ ಕಾರ್ಯಕ್ರಮ ನಿರೂಪಿಸಿದರು. ಡಾ. ಅಲ್ವಿನ್ ವಂದಿಸಿದರು. ಕೆವಿಜಿ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗು ಉದ್ಯೋಗಿಗಳು ಒಳಗೊಂಡ 14 ತಂಡಗಳು ಪಂದ್ಯಾ ಕೂಟದಲ್ಲಿ ಭಾಗವಹಿಸುತಿವೆ.