ವಿಶಾಖಪಟ್ಟಣಂ:ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೃಹತ್ ಮೊತ್ತ ಪೇರಿಸಿದೆ. ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 272 ರನ್ ಕಲೆಹಾಕಿದೆ. ಈ ಮೂಲಕ ಡೆಲ್ಲಿಗೆ 273 ರನ್ಗಳ ಬೃಹತ್ ಗುರಿ ನೀಡಿದೆ. ಐಪಿಎಲ್ ಇತಿಹಾಸದಲ್ಲಿಯೇ ಎರಡನೇ
ಅತೀ ದೊಡ್ಡ ಮೊತ್ತ ಇದಾಗಿದೆ.ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೂ ರಸ್ಸಲ್, ರಿಂಕು ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ ಬೃಹತ್ ಮೊತ್ತ ಪೇರಿಸಲು ನೆರವಾದರು. ಸುನಿಲ್ ನರೈನ್ 39 ಎಸೆತಗಳಲ್ಲಿ ತಲಾ 7 ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 85 ರನ್ ಭಾರಿಸಿದರು. ರಘು ವಂಶಿ 27ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿ ನೆರವಿನಿಂದ 54 ರನ್ ಭಾರಿಸಿದರು. ರಸೆಲ್ 19 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 41 ರನ್ ಬಾರಿಸಿದರೆ ರಿಂಕು ಸಿಂಗ್ ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 26 ರನ್ ಬಾರಿಸಿದರು.
ನಾಯಕ ಶ್ರೇಯಸ್ ಅಯ್ಯರ್ 11 ಎಸೆತಗಳಲ್ಲಿ 2ಸಿಕ್ಸರ್ ಸಹೀತ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೋಲ್ಕತ್ತಾ ಬ್ಯಾಟರ್ಗಳು ಬೌಂಡರಿ ಸಿಕ್ಸರ್ಗಳ ಸುರಿ ಮಳೆಗೆರೆದರು.