ಸುಳ್ಯ:ಸುಳ್ಯದ ಕೆ ವಿ ಜಿ ಪಾಲಿಟೆಕ್ನಿಕ್ನ ಎನ್ಎಸ್ಎಸ್ ಹಿರಿಯ ವಿದ್ಯಾರ್ಥಿಗಳ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆಯುವ ದಶ ಕಾರ್ಯಕ್ರಮಗಳಿಗೆ ಚೆಂಬು ಗ್ರಾಮದಲ್ಲಿ ಚಾಲನೆ ನೀಡಲಾಯಿತು. ದಶಮಾನೋತ್ಸವ ಕಾರ್ಯಕ್ರಮದ ಕಾರ್ಯಕ್ರಮಗಳಲ್ಲಿ ಒಂದಾದ
ಸ್ಮಾರ್ಟ್ ಕ್ಲಾಸ್ ಕೊಡುಗೆ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೆಚೆಂಬು ಇಲ್ಲಿಗೆ ಪ್ರಿಂಟರ್ ಕೊಡುಗೆಯನ್ನು ದಾನಿಗಳಾದ ಲಕ್ಷ್ಮೀಶ ಪಿ.ಕೆಯವರ ಸಹಕಾರದಿಂದ ನೀಡಲಾಯಿತು. ಹಾಗೂ ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ ಮೆಲ್ಚೆಂಬು ಗ್ರಾಮದ ಎರಡು ಕುಟುಂಬಗಳಿಗೆ ನೀರಿನ ಟ್ಯಾಂಕ್ ನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ನ ಗೌರವ ಸಲಹೆಗಾರ ಪಾಲಚಂದ್ರ ವೈ.ವಿ , ಟ್ರಸ್ಟ್ ನ ಕಾರ್ಯ ಅಧ್ಯಕ್ಷ ರಕ್ಷಿತ್ ಬೊಳ್ಳೂರು, ಖಜಾಂಚಿ ಹೇಮಾನಾಥ್ ಜಯನಗರ ,ಪ್ರಚಾರ ಮತ್ತು ಸುದ್ದಿ ವಿಭಾಗದ ಸಂಚಾಲಕ ಪುನೀತ್ ಪಿ.ಕೆ ಹಾಗೂ ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.