ಕಲ್ಲಪಳ್ಳಿ: ಗಡಿ ಗ್ರಾಮವಾದ ಕಲ್ಲಪಳ್ಳಿಯಲ್ಲಿ ಚಿರತೆ ಭೀತಿ ಉಂಟಾಗಿದೆ. ಚಿರತೆಯು ಮನೆಯ ಸಾಕು ಶ್ವಾನಗಳ ಮೇಲೆ ದಾಳಿ ನಡೆಸಿದೆ. ಕಲ್ಲಪಳ್ಳಿಯ ಮಾಂಬಳಂ ಎಂಬಲ್ಲಿ ಮನೆಯ ನಾಯಿಯ ಮೇಲೆ ನಿನ್ನೆ ರಾತ್ರಿ 7 ಗಂಟೆಯ ವೇಳೆಗೆ ಮನೆಯ ನಾಯಿಯ ಮೇಲೆ ದಾಳಿ ನಡೆಸಿ ನಾಯಿಯನ್ನು ಕೊಂದು ಹಾಕಿದೆ. ಮನೆಯವರು ಹೊರ ಬಂದಾಗ
ಚಿರತೆ ಓಡಿ ಹೋಗಿದೆ. ಕೆಲವು ದಿನಗಳ ಹಿಂದೆ ಇಲ್ಲಿಯೇ ಸಮೀಪದ ಮನೆಯೊಂದರ ಶ್ವಾನದ ಮೇಲೆ ಚಿರತೆ ದಾಳಿ ನಡೆಸಿತ್ತು.
ಪ್ರದೇಶಕ್ಕೆ ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ವೈದ್ಯರುಗಳು ಆಗಮಿಸಿ ಚಿರತೆ ದಾಳಿಯಿಂದ ಸತ್ತ ನಾಯಿಯ ಪೋಸ್ಟ್ಮೋರ್ಟಂ ನಡೆಸಿದರು. ಪನತ್ತಡಿ
ಗ್ರಾಮ ಪಂಚಾಯತ್ ಸದಸ್ಯ ಎ. ರಾಧಾಕೃಷ್ಣ ಕಲ್ಲಪಳ್ಳಿ ಸ್ಥಳಕ್ಕೆ ಭೇಟಿ ನೀಡಿದರು. ಚಿರತೆಯ ಹಾವಳಿ ಉಂಟಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.