ಬೆಂಗಳೂರು: ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ತಂಡ 21 ರನ್ಗಳ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 200 ರನ್ ಕಲೆ ಹಾಕಿತು. ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆರ್ಸಿಬಿ ಪರ
ವಿರಾಟ್ ಕೊಹ್ಲಿ 54 ರನ್ ಹಾಗು ಮಹಿಪಾಲ್ ಲಾಮ್ರೋರ್ 34 ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೆಕೆಆರ್ ಪರ ವರುಣ್ ಚಕ್ರವರ್ತಿ 3 ಸುಯೇಶ್ ಶರ್ಮ, ಆಂಡ್ರೆ ರಸ್ಸೆಲ್ ತಲಾ ಎರಡು ವಿಕೆಟ್ ಪಡೆದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ನ ಜಾಸನ್ ರಾಯ್ 56, ನಾರಾಯಣ್ ಜಗದೀಶನ್ 27, ವೆಂಕಟೇಶ್ ಅಯ್ಯರ್ 31, ನಿತೀಶ್ ರಾಣಾ 48 ರನ್ ಬಾರಿಸಿದರು.
ಔಟಾಗದೇ ರಿಂಕು ಸಿಂಗ್ 18, ಡೇವಿಡ್ ವೈಸ್ 12 ರನ್ ಚಚ್ಚಿದರು. ಅರ್ಸಿಬಿಯಲ್ಲಿ ಹಸರಂಗ ಹಾಗೂ ವಿಜಯ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರು. ಆರ್ಸಿಬಿ 8 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 4 ಪಂದ್ಯ ಸೋತು ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.