ಸುಳ್ಯ: 1837 ರಲ್ಲಿ ಸುಳ್ಯದಲ್ಲಿ ಉಂಟಾದ ರೈತ ಕ್ರಾಂತಿಯ ಇತಿಹಾಸವನ್ನು ವಿಶ್ರಾಂತ ಪ್ರಾoಶುಪಾಲ ಪ್ರೊ. ಪ್ರಭಾಕರ ಶಿಶಿಲ ಅವರು ರಚಿಸಿ ಡಾ. ಉಮ್ಮರ್ ಬೀಜದಕಟ್ಟೆ ನೇತೃತ್ವದ ಸಜ್ಜನ ಪ್ರತಿಷ್ಠಾನ ಪ್ರಕಟಿಸಿದ ಅಮರ ಸುಳ್ಯದ ಇತಿಹಾಸ ಸಾರುವ ಕೊಡಗು – ಕೆನರಾ ರೈತ ಬಂಡಾಯ ಪುಸ್ತಕವನ್ನುಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರಿಗೆ ಕೆಪಿಸಿಸಿ
ಅಲ್ಪಸoಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ನೀಡಿದ್ದಾರೆ.ಕೃತಿ ಸ್ವೀಕರಿಸಿದ ಖರ್ಗೆಯವರು ಬಾರಿ ಪುಸ್ತಕ ಬಿಡಿಸಿ ಕಣ್ಣು ಹಾಯಿಸಿದರು.1834 ರಲ್ಲಿ ಕೊಡಗಿನ ರಾಜನನ್ನು ಕೆಳಗೆ ಇಳಿಸಿದ ಮೇಲೆ 110 ಗ್ರಾಮಗಳನ್ನು ಕೊಡಗಿನಿಂದ ಬೇರ್ಪಡಿಸಿ ದ. ಕ. ಜಿಲ್ಲೆಗೆ ಸೇರಿಸಲಾಯಿತು,1799 ರಲ್ಲಿ ಟಿಪ್ಪುಸುಲ್ತಾನ್ ಹತ್ಯೆ ಯಾದ ನಂತರ ದ. ಕ. ಜಿಲ್ಲೆ ಬ್ರಿಟಿಷರ ಆಳ್ವಿಕೆಗೆ ಬಂತು ಬ್ರಿಟಿಷರು ಉತ್ಪತ್ತಿಯ ಅರ್ಧಭಾಗ ಹಣದ ರೂಪದಲ್ಲಿ ಕಂದಾಯ ಕೊಡಬೇಕು ಎಂದು ಶಾಸನ ರೂಪಿಸಿದಾಗ ಕಂದಾಯ ಕಟ್ಟಲು ಹಣವಿಲ್ಲದೆ ಭೂಮಿ ಮಾರಾಟ ಮಾಡಲು ಶುರುಮಾಡಿದರು ಅದರೊಂದಿಗೆ ಉಪ್ಪು ಮತ್ತು ಹೊಗೆಸೊಪ್ಪು ಸ್ವಾಮ್ಯವನ್ನು ಅವರಿಗೆ ಬೇಕಾದವರಿಗೆ ಒಪ್ಪಿಸಿ ಬೆಲೆ ಯೇರಿಕೆಯಿಂದ ರೈತರು ತತ್ತರಿಸಿದಾಗ ರೈತ ಹೋರಾಟ ಪ್ರಾರಂಭಗೊಂಡಿತು, ಕೆದoಬಾಡಿ ರಾಮಯ್ಯ ಗೌಡರು ಹುಲಿಕಡಿದ ನಂಜಯ್ಯ ಮತ್ತು ಕಲ್ಯಾಣ ಸ್ವಾಮಿಯನ್ನು ಮುಂದಿಟ್ಟು ಹೋರಾಟ ನಡೆಸಿದರು ಈ ಅಮರ ಸುಳ್ಯದ ಕ್ರಾಂತಿ ಯ ಚರಿತ್ರೆ ಈ ಪುಸ್ತಕ ದಲ್ಲಿದೆ.