ಮುಂಬೈ: ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆರು ವಿಕೆಟ್ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 212 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 62 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಒಳಗೊಂಡಂತೆ124 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ತಂಡ 19.3 ಓವರ್ಗಳಲ್ಲಿ
4 ವಿಕೆಟ್ಗಳಿಗೆ 214 ರನ್ ಗಳಿಸಿ ಗೆದ್ದಿತು. ಟಿಮ್ ಡೇವಿಡ್ (ಔಟಾಗದೆ 45 ರನ್, 14 ಎ., 4X2, 6X5) ಮತ್ತು ಸೂರ್ಯಕುಮಾರ್ ಯಾದವ್ (55 ರನ್, 29 ಎ., 4X8, 6X2) ಅವರ ಬಿರುಸಿನ ಬ್ಯಾಟಿಂಗ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ತಂಡ, ನಾಯಕ ರೋಹಿತ್ ಶರ್ಮಾ (3) ಅವರನ್ನು ಬೇಗನೇ ಕಳೆದುಕೊಂಡಿತು. ಇಶಾನ್ ಕಿಶನ್ (28 ರನ್, 23 ಎ.) ಮತ್ತು ಕ್ಯಾಮರಾನ್ ಗ್ರೀನ್ (44 ರನ್, 26 ಎ.) ಎರಡನೇ ವಿಕೆಟ್ಗೆ 62 ರನ್ ಸೇರಿಸಿದರು. ಆ ಬಳಿಕ ಸೂರ್ಯಕುಮಾರ್ ಯಾದವ್ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಟಿಮ್ ಡೇವಿಡ್ ಮತ್ತು ತಿಲಕ್ ವರ್ಮಾ (ಅಜೇಯ 29, 21 ಎ.) ಜತೆ ಮುರಿಯದ ಐದನೇ ವಿಕೆಟ್ಗೆ 3.5 ಓವರ್ಗಳಲ್ಲಿ 62 ರನ್ ಸೇರಿಸಿ ಪಂದ್ಯವನ್ನು ರಾಯಲ್ಸ್ ಕೈಯಿಂದ ಕಿತ್ತುಕೊಂಡರು.ಜೇಸನ್ ಹೋಲ್ಡರ್ ಬೌಲ್ ಮಾಡಿದ ಕೊನೆಯ ಓವರ್ನಲ್ಲಿ ಗೆಲುವಿಗೆ 17 ರನ್ಗಳು ಬೇಕಿದ್ದವು. ಮೊದಲ ಮೂರೂ ಎಸೆತಗಳನ್ನು ಡೇವಿಡ್ ಸಿಕ್ಸರ್ಗೆ ಅಟ್ಟಿ, ಮುಂಬೈ ಪಾಳೆಯದಲ್ಲಿ ಗೆಲುವಿನ ಸಂಭ್ರಮ ಹಂಚಿದರು.
ಯಶಸ್ವಿ ಜೈಸ್ವಾಲ್ ಈ ಐಪಿಎಲ್ ಟೂರ್ನಿಯಲ್ಲಿ ಶತಕ ಗಳಿಸಿದ ಮೂರನೇ ಆಟಗಾರ ಎನಿಸಿದರು. ಹ್ಯಾರಿ ಬ್ರೂಕ್ ಮತ್ತು ವೆಂಕಟೇಶ್ ಅಯ್ಯರ್ ಅವರ ನಂತರ ಈ ಸಾಧನೆ ಮಾಡಿದ್ದಾರೆ.
ಆರಂಭಿಕ ಜೋಡಿ ಯಶಸ್ವಿ ಹಾಗೂ ಜಾಸ್ ಬಟ್ಲರ್ ಸೇರಿ ಏಳು ಓವರ್ಗಳಲ್ಲಿ 72 ರನ್ಗಳನ್ನು ಸೇರಿಸಿದರು. ಇದರಲ್ಲಿ ಬಟ್ಲರ್ ಪಾಲು ಕೇವಲ 18 ರನ್ಗಳು ಮಾತ್ರ. ಅದಕ್ಕಾಗಿ ಅವರು 19 ಎಸೆತಗಳನ್ನು ಆಡಿದರು. ಸಂಜು ಸ್ಯಾಮ್ಸನ್ ಹತ್ತು ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ದೇವದತ್ತ ಪಡಿಕ್ಕಲ್ (2), ಜೇಸನ್ ಹೋಲ್ಟರ್, ಹೆಟ್ಮೆಯರ್ ಮತ್ತು ಧ್ರುವ್ ಜುರೇಲ್ ಅವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ.
ಒಂದು ಕಡೆ ವಿಕೆಟ್ಗಳು ಉರುಳುತ್ತಿದ್ದರೂ 21 ವರ್ಷದ ಯಶಸ್ವಿಯ 54 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು.