ಅಹಮದಾಬಾದ್: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಪಾಕಿಸ್ತಾನ ಉತ್ತಮ ಆರಂಭ ಪಡೆದಿದೆ. ಪಾಕಿಸ್ತಾನ 23 ಓವರ್ಗಳಲ್ಲಿ 2 ವಿಕೆಟ್
ನಷ್ಟಕ್ಕೆ 120 ರನ್ ಗಳಿಸಿದೆ. 33 ರನ್ ಗಳಿಸಿದ ನಾಯಕ ಬಾಬರ್ ಅಝಂ ಹಾಗೂ 30 ರನ್ ಗಳಿಸಿದ ಮಹಮ್ಮದ್ ರಿಝ್ವಾನ್ ಕ್ರೀಸ್ನಲ್ಲಿ ಇದ್ದಾರೆ.
ಆರಂಭಿಕರಾದ ಅಬ್ದುಲ್ ಶಕೀಲ್ 20 ರನ್ ಹಾಗೂ ಇಮಾಮ್ ಉಳ್ ಹಖ್ 36 ರನ್ ಗಳಿಸಿ ಔಟ್ ಆಗಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಕಿಕ್ಕಿರಿದು ತುಂಬಿರುವ ಕ್ರಿಕೆಟ್ ಅಭಿಮಾನಿಗಳ ಎದುರುಗಡೆ ರೋಚಕ ಕದನ ನಡೆಯುತ್ತಿದೆ.ಡೆಂಗಿ ಜ್ವರದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶುಭಮನ್ ಗಿಲ್ ಆಡುವ ಬಳಗವನ್ನು ಸೇರಿಕೊಂಡಿದ್ದಾರೆ. ಇವರಿಗಾಗಿ ಇಶಾನ್ ಕಿಶನ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ.ಮತ್ತೊಂದೆಡೆ ಕಳೆದೆರಡು ಪಂದ್ಯಗಳಲ್ಲಿ ವಿಜೇತ ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.