ಅಹಮ್ಮದಾಬಾದ್: ವಿಶ್ವಕಪ್ನ ಭಾರತ-ಪಾಕಿಸ್ತಾನ ಮಧ್ಯೆ ಹೈವೋಲ್ಟೇಜ್ ಪಂದ್ಯ ಅ.14ರಂದು ಅಹಮ್ಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು ಸಾಕಷ್ಟು ಕ್ರೀಡಾಭಿಮಾನಿಗಳು ಉತ್ಸುಕರಾಗಿದ್ದು, ಟಿಕೆಟ್ಗೆ ಭಾರೀ ಬೇಡಿಕೆ
ಉಂಟಾಗಿದೆ.ವಾರದ ಹಿಂದೆಯೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ನಿಮಿಷಗಳಲ್ಲಿ ಬುಕ್ಕಿಂಗ್ ಸೋಲ್ಡ್ ಔಟ್ ಆಗಿತ್ತು. ಬಳಿಕ ಹೀಗಾಗಿ ಸಾಕಷ್ಟು ಅಭಿಮಾನಿಗಳಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬೇಸ್ ಲೆವೆಲ್ ಟಿಕೆಟ್ 2,000ಕ್ಕೆ ಹಾಗೂ ಲಾಂಜ್ ಮತ್ತು ಉನ್ನತ ಮಟ್ಟದ ಟಿಕೆಟ್ಗಳು 15,000 ರೂಪಾಯಿಗೆ ಮಾರಾಟವಾಗಿವೆ. ಈ ಬೆಲೆ ಕೊಡಲು ಅಭಿಮಾನಿಗಳು ತಯಾರಿದ್ದಾರೆ ಆದರೆ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಈ ಮಧ್ಯೆ ಎರಡು ಸಾವಿರ ರೂಪಾಯಿಗೆ ಟಿಕೆಟ್ ಪಡೆದು ಸಾವಿರಾರು ರೂಗೆ ಬ್ಲಾಕ್ನಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ವರದಿಗಳಿವೆ.ಈ ಪಂದ್ಯ ವೀಕ್ಷಿಸಲು ಹೊರಗಿನಿಂದ ಬರುವ ಅಭಿಮಾನಿಗಳು ಉಳಿದುಕೊಳ್ಳಲು ಹೋಟೆಲ್ಗಳನ್ನು ಬುಕ್ ಮಾಡಿದ್ದಾರೆ. ಎಲ್ಲಾ ಹೊಟೇಲ್ಗಳು ಈಗಾಗಲೇ ಬುಕ್ ಆಗಿದ್ದು, ಹೋಟೆಲ್ ಕೊಠಡಿಗಳು ಸಿಗದವರು ಆಸ್ಪತ್ರೆಗಳಲ್ಲಿ ಕೊಠಡಿಗಳನ್ಬು ಕಾಯ್ದಿರಿಸುತ್ತಿದ್ದಾರೆ ಎಂದು ಹೇಳಲಾಗಿದೆ.