ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತಕ್ಕೆ ಬುಧವಾರ ಅಫ್ಗಾನಿಸ್ತಾನ ತಂಡ ಎದುರಾಗಲಿದೆ.ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಸುಲಭ ಜಯದ ನಿರೀಕ್ಷೆಯಲ್ಲಿದೆ. ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಣಿಸಿದ ಭಾರತ ಆತ್ಮ ವಿಶ್ವಾಸದಲ್ಲಿದೆ.ಶುಭಮನ್ ಗಿಲ್ ಅವರಿಗೆ ಈ ಪಂದ್ಯದಿಂದಲೂ
ವಿಶ್ರಾಂತಿ ನೀಡಲಾಗಿದೆ. ಅದರಿಂದಾಗಿ ರೋಹಿತ್ ಜೊತೆಗೆ ಇಶಾನ್ ಇನಿಂಗ್ಸ್ ಆರಂಭಿಸುವರು. ಸ್ಥಳೀಯ ಹೀರೊ ವಿರಾಟ್ ಕೊಹ್ಲಿ ಮತ್ತು ಲಯದಲ್ಲಿರುವ ಕೆ.ಎಲ್ ರಾಹುಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಅಫ್ಗನ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ) ಇಶಾನ್ ಕಿಶನ್ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ (ವಿಕೆಟ್ಕೀಪರ್) ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜ ಆರ್. ಅಶ್ವಿನ್ ಕುಲದೀಪ್ ಯಾದವ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಮೊಹಮ್ಮದ್ ಶಮಿ ಸೂರ್ಯಕುಮಾರ್ ಯಾದವ್ ಶಾರ್ದೂಲ್ ಠಾಕೂರ್.
ಅಫ್ಗಾನಿಸ್ತಾನ: ಹಷ್ಮತ್ಉಲ್ಲಾ ಶಾಹೀದಿ (ನಾಯಕ) ರೆಹಮಾನುಲ್ಲಾ ಗುರ್ಬಾಜ್ ಇಬ್ರಾಹಿಂ ಜದ್ರಾನ್ ರಿಯಾಜ್ ಹಸನ್ ರೆಹಮತ್ ಶಾ ನಜೀಬುಲ್ಲಾ ಜದ್ರಾನ್ ಮೊಹಮ್ಮದ್ ನಬಿ ಇಕ್ರಂ ಅಲಿಖೀಲ್ ಅಜ್ಮತ್ಉಲ್ಲಾ ಒಮರ್ಝೈ ರಶೀದ್ ಖಾನ್ ಮುಜೀಬ್ ಉರ್ ರೆಹಮಾನ್ ನೂರ್ ಅಹಮದ್ ಫಜಲ್ಹಕ್ ಫಾರೂಕಿ ಅಬ್ದುಲ್ ರೆಹಮಾನ್ ನವೀನ್ ಉಲ್ ಹಕ್.
ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಹಾಟ್ಸ್ಟಾರ್ ಆ್ಯಪ್