ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಗುತ್ತಿಗಾರಿನಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿದರು. ಪಂಜ ಕ್ರಾಸ್ನಿಂದ ನೂರಾರು ಕಾರ್ಯಕರ್ತರೊಂದಿಗೆ ಆರಂಭವಾದ ರೋಡ್ ಶೊ ಮುಖ್ಯ ಪೇಟೆಯಲ್ಲಿ
ಸಾಗಿ ಮುತ್ತಪ್ಪ ನಗರದವರೆಗೆ ಸಾಗಿ ಬಂದು ಪೇಟೆಯ ಬಸ್ಸುತಂಗುದಾಣದಲ್ಲಿ ಸಂಪನ್ನಗೊಂಡಿತ್ತು.ಅಭ್ಯರ್ಥಿ ಭಾಗೀರಥಿ ಮುರುಳ್ಯ, ಮಂಡಲ ಸಮಜತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ಎಸ್.ಎನ್ ಮನ್ಮಥ, ಎ.ವಿ.ತೀರ್ಥರಾಮ, ವಿನಯ್ ಕುಮಾರ್ ಮುಳುಗಾಡು, ವೆಂಕಟ್ ದಂಬೆಕೋಡಿ,ಶೈಲೇಶ್ ಅಂಬೆಕಲ್ಲು, ವೆಂಕಟ್ ವಳಲಂಬೆ, ಪಕ್ಷದ ಪ್ರಮುಖರು,ಹಿರಿಯರು,
ಮಹಿಳಾ ಪ್ರಮುಖರು, ಮಹಾ ಶಕ್ತಿಕೇಂದ್ರ ಪ್ರಮುಖರು, ಗ್ರಾಮಪಂಚಾಯತ್ ಸದಸ್ಯರು,ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.