ಬೆಂಗಳೂರು: ಬೆಂಗಳೂರು ವಿಧಾನಸಭಾಂಗಣದಲ್ಲಿ ನಡೆದ
ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಭಾಗವಹಿಸಿದರು. ದ ಕ ಜಿಲ್ಲೆಯಲ್ಲಿ ಐಟಿ ಹಾಗೂ ಜಿಎಸ್ಟಿ ಫಲಾನುಬಾವಿಗಳ ಬಗ್ಗೆ ಈಗಾಗಲೇ ದಾಖಲೆ ಪಡೆದು ರಾಜ್ಯಕ್ಕೆ ಕಳುಹಿಸಲಾದ ಪಲಾನುಭವಿಗಳಿಗೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಈ ಬಗ್ಗೆ ಒಂದು ತಿಂಗಳ ಒಳಗಾಗಿ ಬಗೆಹರಿತೇವೆಂದು ಅಧಿಕಾರಿಗಳಿಂದ ಭರವಸೆ ದೊರೆತಿದೆ ಎಂದು ಭರತ್ ಮುಂಡೋಡಿ ತಿಳಿಸಿದ್ದಾರೆ.