ಅಹಮದಾಬಾದ್: ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಗಳಿಸಿದ ಬಿರುಸಿನ ಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 34 ರನ್ಗಳಿಂದ ಗೆದ್ದಿತು.ಮೊದಲು ಬ್ಯಾಟ್ ಮಾಡಿದ ಟೈಟನ್ಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 188 ರನ್ ಗಳಿಸಿದರೆ, ಸನ್ರೈಸರ್ಸ್ ತಂಡ 9 ವಿಕೆಟ್ಗಳಿಗೆ
154 ರನ್ ಗಳಿಸಲಷ್ಟೇ ಶಕ್ತವಾಯಿತು.ಈ ಗೆಲುವಿನ ಮೂಲಕ ಹಾರ್ದಿಕ್ ಪಾಂಡ್ಯ ಬಳಗ 18 ಪಾಯಿಂಟ್ಸ್ಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಿತು. ಹೈದರಾಬಾದ್ ತಂಡದ ಪ್ಲೇ ಆಫ್ ಸಾಧ್ಯತೆ ಅಸ್ತಮಿಸಿತು.
ಕೇವಲ 58 ಎಸೆತಗಳಲ್ಲಿ ಒಂದು ಸಿಕ್ಸರ್, 13 ಬೌಂಡರಿಗಳಿದ್ದ 101 ರನ್ ಸಿಡಿಸಿದ ಗಿಲ್ ಅವರು ಟೈಟನ್ಸ್ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಆ ಬಳಿಕ ಮೊಹಮ್ಮದ್ ಶಮಿ (21ಕ್ಕೆ 4) ಮತ್ತು ಮೋಹಿತ್ ಶರ್ಮಾ (28ಕ್ಕೆ 4) ಬಿಗುವಾದ ದಾಳಿ ನಡೆಸಿ ಸನ್ರೈಸರ್ಸ್ ತಂಡವನ್ನು ಕಟ್ಟಿಹಾಕಿದರು.ಶಮಿ ಅವರ ದಾಳಿಗೆ ನಲುಗಿದ ಏಡನ್ ಮರ್ಕರಂ ಬಳಗ 29 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ಅದರಲ್ಲಿ ಮೂರು ವಿಕೆಟ್ ಶಮಿ ಪಡೆದರು. ಮೋಹಿತ್ ಅವರು ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು.
ಸನ್ರೈಸರ್ಸ್ ತಂಡದ ಹೆನ್ರಿಕ್ ಕ್ಲಾಸೆನ್ (64 ರನ್, 44 ಎ) ಮತ್ತು ಭುವನೇಶ್ವರ್ ಕುಮಾರ್ (27 ರನ್, 26 ಎ.) ಹೊರತುಪಡಿಸಿ ಇತರೆ ಎಲ್ಲರೂ ವಿಫಲರಾದರು. ಭುವನೇಶ್ವರ್ (30ಕ್ಕೆ5) ಬೌಲಿಂಗ್ನಲ್ಲೂ ಮಿಂಚಿದ್ದರು.ಟೈಟನ್ಸ್ ಪರ ಸಾಯಿ ಸುದರ್ಶನ್ (47, 6 ಬೌಂ, 1ಸಿ) ಕೊಡುಗೆ ನೀಡಿದರು.ಸುದರ್ಶನ್ ಜೊತೆ ಗಿಲ್ ಎರಡನೇ ವಿಕೆಟ್ಗೆ 147 ರನ್ ಸೇರಿಸಿದತು. ಇದು ಐಪಿಎಲ್ನಲ್ಲಿ ಗಿಲ್ ಅವರ ಚೊಚ್ಚಲ ಶತಕ.