ಲಖನೌ:ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಜಯ ಸಾಧಿಸಿದೆ.
ಲಖನೌ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು.136 ರನ್ ಗುರಿ ಬೆನ್ನತ್ತಿದ ಲಖನೌ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು. ಇದರೊಂದಿಗೆ 7 ರನ್ ಅಂತರದಿಂದ ಸೋಲು
ಅನುಭವಿಸಿತು.ನಾಯಕ ಕೆ.ಎಲ್.ರಾಹುಲ್ 61 ಎಸೆತಗಳಲ್ಲಿ 8 ಬೌಂಡರಿ ಸಹಿತ 68 ರನ್ ಗಳಿಸಿದರು. ಕೈಲ್ ಮೇಯರ್ಸ್ 24, ಕೃನಾಲ್ ಪಾಂಡ್ಯ 23 ರನ್ ಗಳಿಸಿದರು. ಉಳಿದಂತೆ ನಿಕೋಲಸ್ ಪೂರನ್, ದೀಪಕ್ ಹೂಡಾ, ಮಾರ್ಕಸ್ ಸ್ಟೋಯಿನಿಸ್ ಸೇರಿದಂತೆ ಇತರೆ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.ಗುಜರಾತ್ ಪರ ಮೋಹಿತ್ ಶರ್ಮಾ, ನೂರ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ರಶೀದ್ ಖಾನ್ ಒಂದು ವಿಕೆಟ್ ಕಬಳಿಸಿದರು.ಗುಜರತ್ ಪರ ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಹಾ 37 ಎಸೆತಗಳಲ್ಲಿ 6 ಬೌಂಡರಿ ಸಮೇತ 47 ರನ್ ಗಳಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 50 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಮೇತ 66 ರನ್ ಗಳಿಸಿದರು.
ಲಖನೌ ಪರ ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೊಯಿನೀಸ್ ತಲಾ 2 ವಿಕೆಟ್ ಪಡೆದರೆ, ಅಮಿತ್ ಮಿಶ್ರಾ ಹಾಗೂ ನವೀನ್-ಉಲ್-ಹಕ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.