ಕಡಬ:ಬಿಜೆಪಿ ಆಭ್ಯರ್ಥಿ ಭಾಗೀರಥಿ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಗೊಳಿತೊಟ್ಟು ಗ್ರಾಮದ ಅಲಂತಾಯ-ಶಿವಾರು ದಲಿತ ಕಾಲೊನಿಗೆ ಭೇಟಿ ನೀಡಿದರು. ಗೊಳಿತೊಟ್ಟು ಗ್ರಾಮದ ಶಾಂತಿನಗರದ 2ನೇ ಬೂತ್ನಲ್ಲಿ ಮನೆ ಭೇಟಿ ಮಾಡಿ ಮತ ಯಾಚನೆ ಮಾಡಿದರು.ಕೊಣಾಲು ಗ್ರಾಮದ ಅರ್ಲದಲ್ಲಿ ಮನೆಭೇಟಿ ಮಾಡಿ ಅಲ್ಲಿನ ಸ್ಥಳಿಯರನ್ನು ಭೇಟಿ ಮಾಡಿ ಮತ
ಯಾಚಿಸಲಾಯಿತು.ನೆಲ್ಯಾಡಿ ಗ್ರಾಮದ ಮಾದೇರಿಯಲ್ಲಿ ಮತ ಯಾಚಿಸಲಾಯಿತು. ಕೌಕ್ರಾಡಿ ಗ್ರಾಮದ ಪೊಟ್ಲಡ್ಕದಲ್ಲಿ ಮನೆಭೇಟಿ ಮಾಡಿ ಮತ ಯಾಚಿಸಲಾಯಿತು.ಕೌಕ್ರಾಡಿ ಗ್ರಾಮದ ಬಾಣಾಜಾಲಿನಲ್ಲಿ, ಶಿರಾಡಿ ಗ್ರಾಮದ ಬೂತ್ ನಂ -1 ರಲ್ಲಿ ಸ್ಥಳೀಯರನ್ನು ಭೇಟಿ ಮಾಡಿ ಮತವಯಾಚಿಸಲಾಯಿತು. ಕೊಣಾಜೆ ಗ್ರಾಮದ ತಮಿಳು ಕಾಲೊನಿ, ರೆಂಜಿಲಾಡಿ ಗ್ರಾಮದ ಸಕೋಟೆಜಾಲು, ಇಚ್ಚಿಲಂಪಾಡಿ ಗ್ರಾಮದ ಎಡೆಂಬೆಲು, ಕೊರ್ಮೆರು-ಕಲ್ಯ ದಲ್ಲಿ ಮತ ಯಾಚಿಸಲಾಯಿತು.ಈ
ಸಂದರ್ಭದಲ್ಲಿ
ಮಂಡಲ ಪ್ರಮುಖರು, ಮಹಿಳಾ ಮೊರ್ಚಾದ ಪ್ರಮುಖರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು,ಮಹಾಶಕ್ತಿಕೇಂದ್ರ ಪ್ರಮುಖರು, ಸಾಮಾಜಿಕ ಜಾಲತಾಣದ ಪ್ರಮುಖರು ಉಪಸ್ಥಿತರಿದ್ದರು.