ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡ ಮುಂಬೈ ತಂಡವನ್ನು 36 ರನ್ಗಳ ಅಂತರದಲ್ಲಿ ಪರಾಭವಗೊಳಿಸಿ ಈ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಮುಂಬೈ ಎರಡನೇ ಸೋಲನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಮುಂಬೈ ಗುಜರಾತ್ ಬೌಲರ್ಗಳ
ಬಿಗು ದಾಳಿಯ ಮುಂದೆ ನಲುಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ 36 ರನ್ಗಳ ಸೋಲನುಭವಿಸಿತು. ಬಿಗು ದಾಳಿ ಸಂಘಟಿಸಿದ ಗುಜರಾತ್ ಬೌಲರ್ಗಳು ನಿರಂತರ ವಿಕೆಟ್ ಉರುಳಿಸಿ ಮುಂಬೈ ಓಟಕ್ಕೆ ಕಡಿವಾಣ ಹಾಕಿದರು. 28 ಎಸೆತಗಳಲ್ಲಿ 4 ಸಿಕ್ಸರ್ ಒಂದು ಬೌಂಡರಿ ನೆರವಿನಿಂದ 48 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಮತ್ತು 26 ಎಸೆತಗಳಲ್ಲಿ 1 ಸಿಕ್ಸರ್ 3 ಬೌಂಡರಿ ನೆರವಿನಿಂದ 39 ರನ್ ಗಳಿಸಿದ ತಿಲಕ್ ವರ್ಮ ನಿರೀಕ್ಷೆ ಹುಟ್ಟಿಸಿದರೂ ಗೆಲುವಿನ ಸಮೀಪ ಬರಲಾಗಲಿಲ್ಲ. ರೋಹಿತ್ ಶರ್ಮಾ 8 ರನ್ ಗಳಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿದರು. ಗುಜರಾತ್ ಪರ ಮಹಮ್ಮದ್ ಸಿರಾಜ್ ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಉರುಳಿಸಿದರು.ಗುಜರಾತ್ ಪರ ಸಾಯಿ ಸುದರ್ಶನ್ 41ಎಸೆತಗಳಲ್ಲಿ 2 ಸಿಕ್ಸರ್ 4 ಬೌಂಡರಿ ನೆರವಿನಿಂದ 63ರನ್ ಗಳಿಸಿದರೆ, ನಾಯಕ ಶುಭಮನ್ ಗಿಲ್ 27 ಎಸೆತಗಳಲ್ಲಿ 1 ಸಿಕ್ಸರ್ 4 ಬೌಂಡರಿ ನೆರವಿನಿಂದ 38 ರನ್ ಗಳಿಸಿದರು. ಜೋಸ್ ಬಟ್ಲರ್
24ಎಸೆತಗಳಲ್ಲಿ 1 ಸಿಕ್ಸರ್ 5 ಬೌಂಡರಿ ನೆರವಿನಿಂದ 39 ರನ್ ಗಳಿಸಿದರು.ಮುಂಬೈ ಪರ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.