ಸುಳ್ಯ:ಸುಳ್ಯದ ಕೊಡಿಯಾಲಬೈಲಿನ ಪಶುಪಾಲನಾ ಇಲಾಖೆಯ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಗೋಶಾಲೆ ನಿರ್ಮಾಣಕ್ಕೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ಶಂಕುಸ್ಥಾಪನೆ ನೆರವೇರಿಸಿದರು.ಗೋವುಗಳ ಸಂರಕ್ಷಣೆಗಾಗಿ ತಾಲೂಕಿನಲ್ಲಿ ಗೋಶಾಲೆ ನಿರ್ಮಾಣ ಮಾಡಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿತ್ತು. ಇದೀಗ ಕೊಡಿಯಾಲಬೈಲಿನಲ್ಲಿ ಸುಸಜ್ಜಿತ ಗೋಶಾಲೆ
ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು. ದ.ಕ.ಜಿಲ್ಲಾಡಳಿತ, ಪ್ರಾಣಿ ದಯಾ ಸಂಘ ದ.ಕ ಜಿಲ್ಲೆ , ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವುಗಳ ಆಶ್ರಯದಲ್ಲಿ 50 ಲಕ್ಷ ವೆಚ್ಚದಲ್ಲಿ ನೂತನ ಗೋಶಾಲೆಗೆ ನಿರ್ಮಾಣ ಮಾಡಲಾಗುತ್ತದೆ.
ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ, ಡಾ.ನಿತಿನ್ ಪ್ರಭು,ಇಲಾಖೆಯ ವೈದ್ಯಾಧಿಕಾರಿಗಳಾದ ಡಾ ಬಿ.ಕೆ ಸೂರ್ಯನಾರಾಯಣ, ಡಾ.ವೆಂಕಟಾಚಲಪತಿ, ಡಾ.ಮೇಘಶ್ರೀ, ಪಾಲಾಕ್ಷ, ಉಬರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ,ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಕುದ್ಪಾಜೆ, ಜಿ.ಜಿ ನಾಯಕ್, ಕಂಟ್ರಾಕ್ಟರ್ ರವಿ ಪ್ರಸಾದ್ ಕೇರ್ಪಳ, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಇಂಜಿನಿಯರ್ ಸಚಿತ, ಉಬರಡ್ಕ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾಧರ, ಮೊದಲಾದವರು ಉಪಸ್ಥಿತರಿದ್ದರು. ಪಶುಪಾಲನಾ ಇಲಾಖೆಯ ದೇವರಾಜ್, ಭವಾನಿ ಸಚಿವ ಅಂಗಾರ ಅವರ ಆಪ್ತ ಕಾರ್ಯದರ್ಶಿ ಸಂಜೀವ ಮತ್ತಿತರರು ಉಪಸ್ಥಿತರಿದ್ದರು