ಗೂನಡ್ಕ:ಗೂನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ನಮಾಝ್ ಖತೀಬರಾದ ಬಹು ಮುಹಮ್ಮದ್ ಅಲೀ ಸಖಾಪಿ ಮಾದಾಪುರ ಇವರ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಬದಲ್ಲಿ ಜಮಾಅತ್ ಆಡಳಿತ ಮಂಡಳಿಯ ಅದ್ಯಕ್ಷರಾದ ಡಿ ಆರ್ ಅಬ್ದುಲ್ ಕಾದರ್,ಸಮೀತಿ ಸದಸ್ಯರು ಹಾಗೂ ವಿವಿದ ಸಂಗ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜಮಾಅತಿನ ಎಲ್ಲಾ ಹಿರಿಯ ಕಿರಿಯ ಸಹೋದರರು ಭಾಗವಹಿಸಿದರು ನಂತರ ನಡೆದ
ಸಮಾರಂಭದಲ್ಲಿ ಮಸೀದಿಯಲ್ಲಿ ಖತೀಬರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮುಹಮ್ಮದ್ ಅಲೀ ಸಖಾಪಿ ಮಾದಾಪುರ ಮತ್ತು ಎಂಟು ವರ್ಷಗಳಿಂದ ಮುಅಝ್ಝಿನ್ ಆಗಿ ಕರ್ತವ್ಯ ನಿರ್ವಹಿಸಿದ್ದ ಹಬೀಬ್ ಹಿಮಮಿ ಉಸ್ತಾದರನ್ನು ಜಮಾಅತ್ ಮತ್ತು ಸಂಘ ಸಂಸ್ಥೆಗಳ ವತಿಯಿಂದ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಮಾಅತ್ ಅದ್ಯಕ್ಷರಾದ ಡಿ ಆರ್ ಅಬ್ದುಲ್ ಕಾದರ್. ಪ್ರದಾನ ಕಾರ್ಯದರ್ಶಿ ಉಮ್ಮರ್ ಪುತ್ರಿ. ಅಶ್ರಪ್ ಎಸ್ ಎ ಹಾಜಿ ಪಿ ಎ ಅಬ್ದುಲ್ಲಾ .ಹಾರಿಸ್ ಕೆ ಎಸ್
ಅಲ್ ಅಮೀನ್ ಗೂನಡ್ಕ ಇದರ ಅದ್ಯಕ್ಷರಾದ ಸಾದಿಕ್ ಗೂನಡ್ಕ ಮತ್ತು ಪದಾದಿಕಾರಿಗಳು ಮತ್ತು ಸುನ್ನೀ ಸಂಘ ಕುಟುಂಬದ ಅದ್ಯಕ್ಷರುಗಳು ಮತ್ತು ಪದಾದಿಕಾರಿಗಳು ಹಿರಿಯರಾದ ಹಾಜಿ ಅಬ್ಬಾಸ್ ಗೂನಡ್ಕ .ಹಾಜಿ ಪಿ ಎ ಉಮ್ಮರ್ ಗೂನಡ್ಕ ಮತ್ತು ಸರಕಾರದ ಹಿರಿಯ ನಿವೃತ್ತ ಅದಿಕಾರಿ ಇಬ್ರಾಹಿಂ ಗೂನಡ್ಕ, ಗ್ರಾಮ ಪಂಚಾಯತಿ ಸದಸ್ಯರಾದ ಪಿ ಕೆ ಅಬೂಶಾಲಿ, ಶೌವಾದ್ ಗೂನಡ್ಕ.
ಜಮಾಅತ್ ನ ಪ್ರವಾಸಿ ಪ್ರತಿನಿಧಿ ಅಝರುದ್ದೀನ್ ಚೇರೂರ್ ಮುಂತಾದವರು ಉಪಸ್ಥಿತರಿದ್ದರು. ಜಮಾಅತ್ ಸಮಿತಿ ನಿರ್ದೇಶಕರಾದ ಮುಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತವಿಕವಾಗಿ ಮಾತನಾಡಿ ಖೋಶಾದಿಕಾರಿ ಲತೀಪ್ ಸಖಾಪಿ ಶುಭ ಹಾರೈಸಿದರು. ಸಿದ್ದೀಕ್ ಗೂನಡ್ಕ ವಂದಿಸಿದರು.