ಸುಳ್ಯ: ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 ಇಂಜಿನಿಯರಿAಗ್ ಪ್ರೀಮಿಯರ್ ಲೀಗ್ (ಇಪಿಎಲ್) ಕ್ರಿಕೆಟ್ ಪಂದ್ಯಾಟ ಕೆ.ವಿ.ಜಿ. ಮೈದಾನದಲ್ಲಿ ನಡೆಯಿತು ಇನ್ಫೋಸಿಸ್ ಉದ್ಯೋಗಿ ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಹಳೆವಿದ್ಯಾರ್ಥಿ ರಂಜಿತ್ ಎನ್.ಆರ್. ಪಂದ್ಯಾಟವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ
ಅವರು ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಹೇಳಿದರು ಪಂದ್ಯಾಟದಲ್ಲಿ ಕಾಲೇಜಿನ 18 ತಂಡಗಳು ಭಾಗವಹಿಸಿದ್ದವು. ಪ್ಲಾಶ್ ಮೊಬೈಲತ ಡಾನ್ಸ್, ಸಿಡಿಮದ್ದು ಪ್ರದರ್ಶನ ನೆರೆದ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದವು. ನಂತರ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾಗಿ ಹಾಗೂ ದ್ವಿತೀಯ ಸ್ಥಾನವನ್ನು ಸಿವಿಲ್ ಬಿಲ್ಡರ್ಸ್ ತಂಡವು ಪಡೆದುಕೊಂಡಿತು. ಈ ಕ್ರೀಡಾ ಕೂಟದಲ್ಲಿ ಹಳೆವಿದ್ಯಾರ್ಥಿಗಳ ತಂಡ ಭಾಗವಹಿಸಿ ಪ್ರದರ್ಶನ ಪಂದ್ಯವನ್ನು
ಆಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್. ವಹಿಸಿದ್ದರು.ಕಾಲೇಜಿನ ಆಡಳಿತಾಧಿಕಾರಿ, ನಾಗೇಶ್ ಕೊಚ್ಚಿ, ಡೀನ್-ಅಡ್ಮಿಶನ್ ಪ್ರೊ. ಬಾಲಪ್ರದೀಪ್ ಕೆ.ಎನ್, ಟ್ರೈನಿಂಗ್ & ಪ್ಲೇಸ್ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ., ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಪ್ರಜ್ಞಾ ಎಂ.ಆರ್. ಮತ್ತು ಪ್ರೊ. ಲೋಕೇಶ್ ಪಿ.ಸಿ, ಪ್ರೊ. ರೇಖಾ ಎ.ಎ., ಪ್ರೊ. ವೆಂಕಟೇಶ್ ಯು.ಸಿ., ಪ್ರೊ. ಜಗದೀಶ್ ಎಂ., ಪ್ರೊ. ಭವ್ಯ ಪಿ.ಎಸ್., ಕ್ರೀಡಾ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ
ಭಾಸ್ಕರ್ ಎಸ್.ಬಿ. ಹಾಗೂ ತೀರ್ಥವರ್ಣ, ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಸದಸ್ಯರುಗಳು ಪಂದ್ಯಾಕೂಟದ ಯಶಸ್ಸಿಗೆ ಸಂಪೂರ್ಣ ಸಹಕರಿಸಿದರು.