ಸುಳ್ಯ:ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನಾಚರಣೆಯನ್ನು ನಾದ್ಯಂತ ಸಂಭ್ರಮದಿಂದ ಆಚರಿಸಲಾಗುತಿದೆ. ವಿವಿಧೆಡೆ ಮದರಸಾ ಮಕ್ಕಳಿಂದ ಪ್ರವಾದಿ ಕುರಿತ ಭಕ್ತಿ ಗೀತೆಗಳು, ಪ್ರಭಾಷಣಗಳು ಮತ್ತಿತರ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಮಿಲಾದ್ ಸಂದೇಶ ಜಾಥಾ ಮೂಲಕ ಪ್ರವಾದಿ ಜೀವನ ಸಂದೇಶವನ್ನು ಸಾರಲಾಯಿತು.ಸುಳ್ಯ ಸೇರಿ ದ.ಕ ಜಿಲ್ಲೆಯಾದ್ಯಂತ ಮಿಲಾದ್ ಜಾಥಾ, ವಿಶೇಷ ಪ್ರಾರ್ಥನೆ ಮೂಲಕ
ಸಂಭ್ರಮದ ಈದ್ ಮಿಲಾದ್ ಆಚರಿಸಲಾಯಿತು.ಸುಳ್ಯ ಗಾಂಧಿನಗರ ಮದರಸ ದರ್ಸ್ ವಿದ್ಯಾರ್ಥಿಗಳ ಕನ್ಸೋಲಿಯಂ ವಿದ್ಯಾರ್ಥಿ ಫೆಸ್ಟ್ ಸಮಾರೋಪ ಮತ್ತು ಈದ್ ಮೀಲಾದ್ ಸಮಾವೇಶಕ್ಕೆ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ವಠಾರದಲ್ಲಿ ಚಾಲನೆ ನೀಡಲಾಯಿತು.
ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಕೆ. ಎಂ. ಮುಸ್ತಫ ಧ್ವಜಾರೋಹಣ ಮಾಡಿ ಚಾಲನೆ ನೀಡಿದರು. ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುವಾ ಪ್ರಾರ್ಥನೆ ಮಾಡಿದರು
ಮುದರ್ರಿಸ್ ಇರ್ಫಾನ್ ಸಖಾಫಿ ಸಂದೇಶ ನೀಡಿದರು.
ಪೈಗಂಬರ್ ಮುಹಮ್ಮದ್ ಅವರ ಜನ್ಮದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ಹಾಗೂ ಆಕರ್ಷಕ ಮಿಲಾದ್ ಸಂದೇಶ ಜಾಥಾ ಮೊಗರ್ಪಣೆ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಸ್ಥಳೀಯ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ದ್ವಜಾರೋಹಣ ನೆರವೇರಿಸಿದರು.
ಬಳಿಕ ಮೊಗರ್ಪಣೆ ಮಸೀದಿ ವಠಾರದಿಂದ ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು.