ನವದೆಹಲಿ: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಏಳು ವಿಕೆಟ್ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 181 ರನ್ ಗಳಿಸಿದರೆ, ಡೆಲ್ಲಿ ತಂಡ 16.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 187 ರನ್ ಗಳಿಸಿತು ಆರ್ಸಿಬಿ ಬೌಲಿಂಗ್ ದಾಳಿಯನ್ನು
ಪುಡಿಗಟ್ಟಿದ ಸಾಲ್ಟ್ (87 ರನ್, 45 ಎ., 4X8, 6X6) ಅವರು ಕ್ಯಾಪಿಟಲ್ಸ್ನ ಗೆಲುವಿನ ರೂವಾರಿಯೆನಿಸಿದರು. ನಾಯಕ ವಾರ್ನರ್ (22 ರನ್) ರನ್ ಗಳಿಸಿದರು.
ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೊಹ್ಲಿ(55), ನಾಯಕ ಫಫ್ ಡುಪ್ಲೆಸಿ (45) ಮತ್ತು ಮಹಿಪಾಲ್ ಲೊಮ್ರೊರ್ (ಅಜೇಯ 54) ಉತ್ತಮ ಆಟದ ನೆರನಿಂದ ತಂಡ ಸವಾಲಿನ ಮೊತ್ತ ಕಲೆಹಾಕಿತು.
ವಿರಾಟ್ ಮತ್ತು ಡುಪ್ಲೆಸಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 82 ರನ್ ಸೇರಿಸಿದರು. ಗ್ಲೆನ್ ಮ್ಯಾಕ್ಸ್ವೆಲ್ ಡಗ್ಔಟ್ ಅದರು. ಬಳಿಕ ಮಹಿಪಾಲ್ ತಮ್ಮ ಸಾಮರ್ಥ್ಯ ಮೆರೆದರು. ಅವರು ವಿರಾಟ್ ಜೊತೆಗೂಡಿ ಮೂರನೇ ವಿಕೆಟ್ಗೆ 55 ರನ್ ಸೇರಿಸಿದರು. ಮಹಿಪಾಲ್ ಮೂರು ಸಿಕ್ಸರ್ಗಳು ಮತ್ತು ಆರು ಬೌಂಡರಿಗಳು ಬಾರಿಸಿದರು.