ಚೆನ್ನೈ: ಬೌಲರ್ಗಳ ಸಂಘಟಿತ ದಾಳಿಯಿಂದ ಚೆನ್ನೈ ತಂಡವು ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 6 ವಿಕೆಟ್ಗಳಿಂದ ಜಯಿಸಿತು.ಮುಂಬೈ ಇಂಡಿಯನ್ಸ್ ಬಳಗವನ್ನು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 139 ರನ್ಗಳಿಗೆ ಕಟ್ಟಿಹಾಕಿದರು. ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ತಂಡವು
ಇನ್ನೂ 14 ಎಸೆತಗಳು ಬಾಕಿಯಿರುವಾಗಲೇ 4 ವಿಕೆಟ್ಗಳಿಗೆ 140 ರನ್ ಗಳಿಸಿ ಜಯಭೇರಿ ಬಾರಿಸಿತು.ಮುಂಬೈ ಇಂಡಿಯನ್ಸ್ ಪರ ನೆಹಲ್ ವಡೇರಾ 64, ಸೂರ್ಯಕುಮಾರ್ ಯಾದವ್ 26, ಟ್ರಿಸ್ಟನ್ ಸ್ಟಬ್ಸ್ 20 ರನ್ ಗಳಿಸಿದರು. ಚೆನ್ನೈ ಪರ ದೀಪಕ್ ಚಾಹರ್ 18ಕ್ಕೆ2, ತುಷಾರ್ ದೇಶಪಾಂಡೆ 26ಕ್ಕೆ2, ಮಥೀಷ್ ಪಥಿರಾಣ 15ಕ್ಕೆ3 ವಿಕೆಟ್ ಉರುಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಋತುರಾಜ್ ಗಾಯಕವಾಡ 30, ಡೆವೊನ್ ಕಾನ್ವೆ 44, ಅಜಿಂಕ್ಯ ರಹಾನೆ 21, ಶಿವಂ ದುಬೆ ಔಟಾಗದೆ 26 ರನ್ ಬಾರಿಸಿದರು. ಪೀಯೂಷ ಚಾವ್ಲಾ 25ಕ್ಕೆ2, ಟ್ರಿಸ್ಟನ್ ಸ್ಟಬ್ಸರ್ 14ಕ್ಕೆ1, ಆಕಾಶ್ ಮದ್ವಾಲ್ 4ಕ್ಕೆ1 ವಿಕೆಟ್ ಪಡೆದರು.