ಸುಳ್ಯ:ರಾಷ್ಟ್ರೀಯ ಖ್ಯಾತಿಯ ವೈದ್ಯಕೀಯ ಕಾಲೇಜು ಪಾಂಡಿಚೇರಿಯ
ಜವಾಹರಲಾಲ್ ಇನ್ಸಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುವೇಟ್
ಮೆಡಿಕಲ್ ರೀಸರ್ಚ್ನಲ್ಲಿ ಎಂಬಿಬಿಎಸ್ ಅಧ್ಯಯನಕ್ಕೆ ಸುಳ್ಯ ತಾಲೂಕಿನ ಅರಂತೋಡಿನ ದಕ್ಷಾ ಕೆ.ಎಸ್. ಆಯ್ಕೆಯಾಗಿದ್ದಾರೆ. ನೀಟ್ ಪರೀಕ್ಷೆಯಲ್ಲಿ
680 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಈ ಅವಕಾಶ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಕೇವಲ ಇಬ್ಬರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಅಧ್ಯಯನ ಮಾಡಲು ಆಯ್ಕೆಯಾಗಿದ್ದಾರೆ. ಇವರು ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕಂಬಳ ಹಾಗೂ ಸೀಮಾ ದಂಪತಿಯ ಪುತ್ರಿ. ಹಾಗೂ ವಕೀಲರಾದ ದೀಪಕ್ ಕುತ್ತಮೊಟ್ಟೆ ಅವರ ಸಹೋದರಿಯ ಪುತ್ರಿ.