ಸುಳ್ಯ:ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾವನಾ ಸುಗಮ ಸಂಗೀತ ಬಳಗ ಮತ್ತು ಸುವಿಚಾರ ಸಾಹಿತ್ಯ ಸಂಘ, ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇದರ ಆಶ್ರಯದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿದ್ಯಾ ಬೋಧಿನೀ ಸಂಸ್ಥೆಗಳ ಅಧ್ಯಕ್ಷ ರಾಧಾಕೃಷ್ಣರ ರಾವ್ ಯು ನಡೆಸಿ ಮಳೆ ಹಾಡುಗಳ ಕಲರವ ಕಾರ್ಯಕ್ರಮ
ಮನಸ್ಸಿಗೆ ಮುದ ನೀಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲಿ ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಳೆ ತಜ್ಞ ಹಾಗೂ ವಿಶ್ಲೇಷ ಪಿ.ಜಿ.ಎಸ್.ಎನ್. ಪ್ರಸಾದ್ ಇವರನ್ನು ಅವರ ಸಾಧನೆಯನ್ನು ಗುರುತಿಸಿ ಕ ಸಾ ಪ ಸುಳ್ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ವರ್ಷಧಾರೆ ಮಳೆ ಕಲರವ ಕಾರ್ಯಕ್ರಮವನ್ನು ಭಾವನಾ ಸುಗಮ ಸಂಗೀತ ಬಳಗದ ಕೆ.ಆರ್. ಗೋಪಾಲಕೃಷ್ಣ ಹಾಗೂ ಉಪನ್ಯಾಸಕಿ ಸತ್ಯವತಿ ಇವರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ ಸಾ ಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ಕೋಶಾಧಿಕಾರಿ ದಯಾನಂದ ಆಳ್ವಾ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಯಶೋಧರ ನಾರಾಲು ಸ್ವಾಗತಿಸಿ, ಅರವಿಂದ ಬಾಳಿಲ ಎಲ್ಲರನ್ನೂ ವಂದಿಸಿದರು. ದಿನೇಶ್ ಕಾರ್ಯಕ್ರಮ ನಿರೂಪಿದರು.