ಮಡಿಕೇರಿ: ಜು.9 ಮತ್ತು 10 ರಂದು ಕೆಜಿಎಫ್ನ ಡಾ. ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನಲ್ಲಿ ನಡೆದ 10 ಕಿ.ಮಿ ಕ್ರಾಸ್ ಕಂಟ್ರಿ ಓಟದಲ್ಲಿ ಚಿನ್ನದ ಪದಕ ಪಡೆದ ಅಂಜೇರಿರ ಟಿಶನ್ ಮಾದಪ್ಪ ರಾಷ್ಟ್ರೀಯ ಮಟ್ಟದ ಇಂಟರ್ ಕಾಲೇಜ್ ಆಲ್ ಇಂಡಿಯಾ ಕ್ರಾಸ್ ಕಂಟ್ರಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಟಿಶನ್ ಮಾದಪ್ಪ ಸುಳ್ಯದ
ಕೆವಿಜಿ ಇಂಜಿನಿಯರಿಂಗ್ ಕಾಲೇಜ್ನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ಟಿಶನ್ ಇತ್ತೀಚೆಗೆ ವಿ. ಟಿ.ಯು ಲೆವಲ್ ರಾಜ್ಯ ಮಟ್ಟದ 10 ಕಿ.ಮೀ. ಕ್ರಾಸ್ ಕಂಟ್ರಿ ಓಟದಲ್ಲಿ, ಎರಡನೆ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಆಲ್ ಇಂಡಿಯಾ ಅಂತರ ಕಾಲೆಜು ಮಟ್ಟದಲ್ಲಿ ಭಾಗವಹಿಸಿದರು. ಇವರು 2022 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ವಿ.ಟಿ.ಯು ರಾಜ್ಯ ಮಟ್ಟದ ಅಥ್ಲೆಟಿಕ್ಸ ನಲ್ಲಿ 21ಕಿ.ಮಿ ಹಾಫ್ ಮ್ಯಾರಥಾನ್ ನಲ್ಲಿ ಕಂಚಿನ ಪಡೆದುಕೊಂಡಿದ್ದಾರೆ. 2023 ನೇ ಸಾಲಿನಲ್ಲಿ ವಿ.ಟಿ.ಯು ರಾಜ್ಯ ಮಟ್ಟದ ಅಂತರ್ ಕಾಲೆಜು ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 5000 ಮೀಟರ್ನಲ್ಲಿ ಬೆಳ್ಳಿ ಪದಕ 10,000 ಮೀಟರ್ನಲ್ಲಿ ಬೆಳ್ಳಿ ಪದಕ, ಹಾಗು 21,000ಕಿ.ಮಿ ಹಾಫ್ ಮ್ಯಾರಥಾನ್ ನಲ್ಲಿ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ.
ಟಿಶನ್ ಮಾದಪ್ಪ ಕೊಡಗಿನ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಅಂಜೇರಿರ ಧನು ಮತ್ತು ಅಂಜೇರಿರ ಮಾದಪ್ಪನವರ ಪುತ್ರ.