ಸುಳ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಹಾಗೂದ.ಕ. ಜಿಲ್ಲಾ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ ಅವರು ವಿವಿಧ ವಿಧಾನಸಭಾ ಕ್ಷೇತ್ರ ಹಾಗೂ
ಬ್ಲಾಕ್ ವ್ಯಾಪ್ತಿಗಳಿಗೆ ಪ್ರಚಾರ ಸಮಿತಿಯ ಉಸ್ತುವಾರಿಗಳನ್ನು ನೇಮಿಸಿ ಶುಕ್ರವಾರ ಆದೇಶಿಸಿದ್ದಾರೆ. ಅದರಂತೆ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಎಂ.ವೆಂಕಪ್ಪ ಗೌಡ ನೇಮಕಗೊಂಡಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಸಂಶುದ್ದೀನ್ ಹಾಗೂ ಕಡಬ ಬ್ಲಾಕ್ ಉಸ್ತುವಾರಿಯಾಗಿ ಬಾಲಕೃಷ್ಣ ಬಳ್ಳೇರಿ ನೇಮಕಗೊಂಡಿದ್ದಾರೆ.