ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.
‘ಗೃಹ ಜ್ಯೋತಿ‘ ಯೋಜನೆಯಲ್ಲಿ ಎಲ್ಲರಿಗೂ 200 ಯೂನಿಟ್ವರೆಗೆ ವಿದ್ಯುತ್ ಉಚಿತ.12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ
ಶೇ 10 ರಷ್ಟು ವಿದ್ಯುತ್ ಉಚಿತ. 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡಲಾಗುವುದು.ಈ ಹಿಂದಿನ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿ ಮಾಡಬೇಕು.ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೇ ಗ್ಯಾರಂಟಿ ಯೋಜನೆ ಜಾರಿ.
ಆಗಸ್ಟ್ 15 ರಿಂದ ‘ಗೃಹಲಕ್ಷ್ಮಿ ಯೋಜನೆ’ ಜಾರಿ. ಯೋಜನೆಗೆ ನೋಂದಾಯಿಸಲು 1 ತಿಂಗಳ ಕಾಲಾವಕಾಶ. ಆಧಾರ್, ಬ್ಯಾಂಕ್ ಪಾಸ್ಬುಕ್ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಜೂ. 15 ರಿಂದ ಜುಲೈ 15 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗ ಅವಕಾಶ. ಆ.15 ರಿಂದ ಖಾತೆಗೆ ಹಣ ಜಮೆ ಆಗಲಿದೆ. ಎಪಿಎಲ್, ಬಿಪಿಎಲ್ ವ್ಯತ್ಯಾಸ ಇಲ್ಲದೆ, ಮನೆಯ ಯಜಮಾನಿಗೆ ಮಾಸಿಕ 2000 ರೂ.ಯೋಜನೆಯ ಲಾಭ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ.ಎಲ್ಲಾ ರೀತಿಯ ಮಾಸಾಶನ (ಅಂಕವಿಕಲರು, ವಿಧವೆಯರು, ಹಿರಿಯ ನಾಗರಿಕರು) ಪಡೆಯುವ ಮನೆಯೊಡತಿಗೂ ಯೋಜನೆ ಅನ್ವಯ ‘ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಜೂನ್ 11ರಿಂದ ‘ಶಕ್ತಿ ಯೋಜನೆ’ ಜಾರಿ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ. ಎಸಿ, ಸ್ಲೀಪರ್, ನಾನ್ ಎಸಿ ಸ್ಲೀಪರ್ ಬಸ್ಗಳಿಗೆ ಅನ್ವಯವಾಗುವುದಿಲ್ಲ.
‘ಅನ್ನ ಭಾಗ್ಯ’ ಯೋಜನೆಯಲ್ಲಿ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ ಉಚಿತ. ಜುಲೈ ಒಂದರಿಂದ ವಿತರಣೆ.
‘ಯುವ ನಿಧಿ’ ಯೋಜನೆಯಲ್ಲಿ 2022-23ರಲ್ಲಿ ಪದವಿ ಪಡೆದವರಿಗೆ ತಿಂಗಳಿಗೆ 3000, 24 ತಿಂಗಳವರೆಗೆ ಕೆಲಸ ಸಿಗದಿದ್ದರೆ ಈ ಸೌಲಭ್ಯ ಅನ್ವಯ.
ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ನಾವು ನುಡಿದಂತೆ ನಡೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು