ಸುಳ್ಯ: ಸುಳ್ಯ ತಾಲೂಕಿನ ಕೆಲವೆಡೆ ಸೋಮವಾರ ಸಂಜೆ ಮಳೆಯಾಗಿದೆ. ಸಂಪಾಜೆ, ಗುತ್ತಿಗಾರಿನಲ್ಲಿ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಸುಳ್ಯ ನಗರದಲ್ಲಿ ಕೆಲವೆಡೆ ಹನಿ ಮಳೆಯಾಗಿದೆ.ಆಲೆಟ್ಟಿ, ಅಜ್ಜಾವರ ಗ್ರಾಮದಲ್ಲಿ ಸಂಜೆಯ ವೇಳೆಗೆ ಮಳೆಯಾಗಿದೆ. ಗಾಳಿಯೂ ಬೀಸಿದೆ. ಆಲೆಟ್ಟಿ ಗ್ರಾಮದ ಕೆಲವೆಡೆ ಗಾಳಿ ಬೀಸಿದ್ದು ಹಾನಿಯೂ ಸಂಭವಿಸಿದೆ. ಸುಳ್ಯ ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಸುಳ್ಯ ತಾಲೂಕಿನ ವಿವಿಧ ಕಡೆ ಮೋಡ ಕವಿದ ವಾತಾವರಣ ಇತ್ತು. ಕೆಲವೆಡೆ ಹನಿ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು. ದಿನಪೂರ್ತಿ ಭಾರೀ ಸೆಕೆ ಇತ್ತು.