ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ:ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬ್ಯಾಂಕ್ ಆಫ್ ಬರೋಡಾದಿಂದ ಗಣಕಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಝೋನಲ್ ಹೆಡ್ ಗಾಯತ್ರಿ.ಆರ್ ಅವರು ಶ್ರೀ ದೇವಳಕ್ಕೆ ಸುಮಾರು ೧ ಲಕ್ಷದ ೨೫ ಸಾವಿರ ಮೌಲ್ಯದ ೫ ಕಂಪ್ಯೂಟರ್ಗಳನ್ನು
ಮಂಜೂರಾತಿಗೊಳಿಸಿದ್ದರು. ಸೋಮವಾರ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ.ಎಸ್.ಸುಳ್ಳಿ ಮತ್ತು ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಬ್ಯಾಂಕ್ನ ಮಂಗಳೂರು ವಿಭಾಗದ ಜಿಎಂ ಗಾಯತ್ರಿ ಅವರ ಪರವಾಗಿ ಬ್ಯಾಂಕ್ ಆಫ್ ಬರೋಡಾದ ರೀಜನಲ್ ಮ್ಯಾನೇಜರ್ ದೇವಿಪ್ರಸಾದ್ ಶೆಟ್ಟಿ ಹಸ್ತಾಂತರಿಸಿದರು.
ಬಳಿಕ ಬಿಓಬಿಯ ರೀಜನಲ್ ಮ್ಯಾನೇಜರ್ ದೇವಿಪ್ರಸಾದ್ ಶೆಟ್ಟಿ ಅವರನ್ನು ದೇವಳದ ಆಡಳಿತ ಕಚೇರಿಯಲ್ಲಿ ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಎಸ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಬಿಓಬಿಯ ಪುತ್ತೂರು ರೀಜನಲ್ ಆಫೀಸ್ನ ವೆಂಕಟ್, ಬಿಓಬಿಯ ಸುಬ್ರಹ್ಮಣ್ಯ ಶಾಖಾ ಪ್ರಬಂಧಕ ಕೃಷ್ಣಪ್ರಸಾದ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.