ನವದೆಹಲಿ: ಭಾರತದ ಯುವ ಆಟಗಾರ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ ಟೂರ್ನಿಯ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಅಜೇರ್ಬೈಜಾನ್ನ ಬಾಕುನಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ನಂ. 3 ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಅಂತಿಮ ಹಣಾಹಣಿಗೆ ಪ್ರವೇಶ
ಪಡೆದಿದ್ದಾರೆ. ಟೈಬ್ರೇಕ್ಗಳ ನಂತರ 3.5-2.5 ಅಂತರದಿಂದ ಅಮೆರಿಕದ ಆಟಗಾರನನ್ನು ಸೋಲಿಸುವಲ್ಲಿ ಭಾರತದ ಪ್ರಜ್ಞಾನಂದ ಯಶಸ್ವಿಯಾದರು. ಅಂತಿಮ ಹಣಾಹಣಿಯಲ್ಲಿ ಇವರು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎದುರಿಸಲಿದ್ದಾರೆ.
17 ವರ್ಷದ ಪ್ರಜ್ಞಾನಂದ ಮುಂದಿನ ವರ್ಷದ ಅಭ್ಯರ್ಥಿಗಳ ಸ್ಪರ್ಧೆಯಲ್ಲಿ ಈಗಾಗಲೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಹೀಗೆ ಸ್ಥಾನ ಪಡೆದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ.