ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ವಿನೋಬನಗರ ಗೇರುಬೀಜ ಕಾರ್ಖಾನೆ,ಸೋಣಂಗೇರಿ ಕಾಲೋನಿ,ಕುಕ್ಕಂದೂರು ಕಾಲೋನಿ,ಚೆಂಡಮೂಲೆ, ಅಡ್ಕಾರು ಮಾಯಿಲಾ ಕೋಟೆ,,ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ
ಕೈಗೊಳ್ಳಲಾಯಿತು. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ ನಡೆಯಿತು. ಸಂದರ್ಭದಲ್ಲಿ ಪ್ರಮುಖರಾದ ಎಸ್.ಎನ್. ಮನ್ಮಥ, ವಿನಯ ಕುಮಾರ್ ಮುಳುಗಾಡು, ಸುಧಾಕರ ಕಾಮತ್, ಸಿಂಧು ಪ್ರಭು,ಜಯರಾಜ್ ಕುಕ್ಕೆಟ್ಟಿ,ಮನುದೇವ ಪರಮಲೆ,ಪ್ರಸಾದ್ ಕಾಟೂರು,ಹಾಗೂ ಮಹಾಶಕ್ತಿ ಕೇಂದ್ರ ಪ್ರಮುಖರು,ಶಕ್ತಿ ಕೇಂದ್ರ ಪ್ರಮುಖರು,ಬೂತ್ ಸಮಿತಿಯ ಪ್ರಮುಖರು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.