ಸುಳ್ಯ: ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್
ಸುಳ್ಯ ನಗರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ವಿವಿಧ ಕಡೆಗಳಲ್ಲಿ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ನಡೆಸಿದರು. ವಿವಿಧ ಕಡೆಗಳಲ್ಲಿ ಕಾರ್ನರ್ ಮೀಟಿಂಗ್ ನಡೆಯಿತು. ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಗುರುಮೂರ್ತಿ, ಜಿಲ್ಲಾ ಸಂಯೋಜಕ ರವಿಪ್ರಸಾದ್, ಜಿಲ್ಲಾ ಮುಖಂಡ ವೇಣುಗೋಪಾಲ ಪೂಚ್ಚಪ್ಪಾಡಿ, ಖಲಂದರ್ ಎಲಿಮಲೆ, ರಶೀದ್ ಜಟ್ಟಿಪಳ್ಳ, ಮತ್ತಿತರರು ಉಪಸ್ಥಿತರಿದ್ದರು.