ಸುಳ್ಯ:ಮಕ್ಕಳಿಗೆ ಭಕ್ತಿಯ, ಆಧ್ಯಾತ್ಮಿಕತೆಯ, ಸಂಸ್ಕೃತಿಯ ಪಾಠ ಹೇಳಿದ ಭಜನಾ ತರಬೇತಿ ಕಮ್ಮಟ ಅ.15ರಂದು ಸಮಾಪನಗೊಳ್ಳಲಿದೆ. ಸುಳ್ಯ ಬೆಟ್ಟಂಪಾಡಿಯ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಮತ್ತು ಸುಳ್ಯ ತಾಲೂಕು ಭಜನಾ ಪತಿಷತ್ನ ಸಹಯೋಗದಲ್ಲಿ ಭಜನಾ ಮಂದಿರದಲ್ಲಿ ತಾಲೂಕು ಮಟ್ಟದ ಭಜನಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅ.11 ರಿಂದ ಆರಂಭಗೊಂಡ
ಶಿಬಿರದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ 160 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭಜನೆ, ಕುಣಿತ ಭಜನೆಯನ್ನು ಕಲಿಸಲಾಗಿದೆ. ಐದು ದಿನಗಳ ಕಾಲ ನಡೆದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದ ಅಂಗವಾಗಿ 15 ರಂದು ಅಪರಾಹ್ನ 3ರಿಂದ ನಡೆಯಲಿದೆ.
![](https://thesulliamirror.com/wp-content/uploads/2023/10/IMG_20231014_222536.jpg)
ಶಿಬಿರಾರ್ಥಿ ಮಕ್ಕಳಿಂದ ಭಜನಾ ಕಾರ್ಯಕ್ರಮ ಹಾಗೂ ಕುಣಿತ ಭಜನೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಅಂಗಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ನ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ, ನ.ಪಂ. ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಡಾ.ಸಾಯಿಗೀತಾ ಜ್ಞಾನೇಶ್, ಶಿವಪ್ರಸಾದ್ ಆಲೆಟ್ಟಿ ಭಾಗವಹಿಸಲಿದ್ದಾರೆ. ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.