ಪೆರುವಾಜೆ:ಪೆರುವಾಜೆ ಗ್ರಾಮದ ಮುರ್ಕೆತ್ತಿ ಬಜ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿನಿಂದ ಪಂಚಾಯತ್ನ ಕುಡಿಯುವ ನೀರಿನ ವ್ಯವಸ್ಥೆ ನಿಂತು ಹೋಗಿದೆ. ಈ ಭಾಗದ ಸುಮಾರು 20 ಮನೆಯವರು ನೀರಿನ
ಪರ್ಯಾಯ ವ್ಯವಸ್ಥೆ ಇಲ್ಲದೆ ಪಂಚಾಯತ್ ನ ಕುಡಿಯುವ ನೀರಿನ ವ್ಯವಸ್ಥೆಯನ್ನೇ ಅವಲಂಭಿಸಿದ್ದಾರೆ. ಆದರೆ ಕಡು ಬೇಸಿಗೆಯಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದ್ದು ಪಂಚಾಯತ್ನ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ವ್ಯತ್ಯವಾಗಿದೆ. ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಕೇಂದ್ರ ಸರಕಾರದ ಜಲ ಜೀವನ್ ಮೆಷಿನ್ ಯೋಜನೆಯೂ ಇಲ್ಲಿ ಅನುಷ್ಠಾನಗೊಂಡಿಲ್ಲ. ಮಳೆಯೂ ಸರಿಯಾಗಿ ಬಾರದೇ ಇಲ್ಲಿನ ನಿವಾಸಿಗಳು ರೋಸಿ ಹೋಗಿದ್ದಾರೆ. ಮತದಾನದ ದಿನ ಹತ್ತಿರವಿದ್ದರೂ ಜನಪ್ರತಿನಿಧಿನಗಳು, ಅಧಿಕಾರಿಗಳೂ ಕೂಡ ಸಮಸ್ಯೆ ನಿವಾರಣೆಗೆ ಮನಸ್ಸು ಮಾಡುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.