ಬೆಳಗಾವಿ:ಬೆಳಗಾವಿ ಸುವರ್ಣ ಸೌಧದ ಬಳಿ ಒಂದು ವರ್ಷದ ಹಿಂದೆ ತಾನು ನೆಟ್ಟಿದ್ದ ಗಿಡವನ್ನು ಪರಿಶೀಲಿಸಿದ ಪುತ್ತೂರು ಶಾಸಕ ಅಶೋಕ್ ರೈ ಅವರು ಗಿಡಕ್ಕೆ ಗೊಬ್ಬರ ಹಾಕಿ, ನೀರುಣಿಸಿದರು. ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನದಲ್ಲಿ ಭಾಗಿಯಾದ ದಿನದಂದು ಆ ಸವಿನೆನಪಿಗೋಸ್ಕರ
ಸುವರ್ಣ ಸೌಧದ ಬಳಿ ಗಿಡವೊಂದನ್ನು ನೆಟ್ಟಿದ್ದು ಆ ಗಿಡವನ್ನು ಒಂದು ವರ್ಷದ ಬಳಿಕ ವಿಕ್ಷಣೆ ಮಾಡಿ ಶಾಸಕರು ಗೊಬ್ಬರ ಹಾಗೂ ನೀರು ಹಾಕಿದರು. ಗಿಡವನ್ನು ಚೆನ್ನಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ಗಿಡ ಚೆನ್ನಾಗಿ ಬೆಳೆದಿದೆ. ಅದಕ್ಕೆ ಗೊಬ್ಬರ ಮತ್ತು ನೀರು ಹಾಕಿ ಪೋಷಣೆ ಮಾಡುವಂತೆ ಸೂಚಿಸಿದ್ದೇನೆ. ಆ ಮರ ಬೆಳೆದು ದೊಡ್ಡದಾದರೆ ಅದುವೇ ನನಗೆ ದೊಡ್ಡ ಸಂತೋಷ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿಯೂ ಮುಂದಿನ ದಿನಗಳಲ್ಲಿ ಗಿಡ ನೆಡುವ ಅಭಿಯಾನ ಆರಂಭಿಸಿ ರಸ್ತೆ ಬದಿಯಲ್ಲಿ ಖಾಲಿ ಇರುವ ಜಾಗದಲ್ಲಿ ಫಲವಸ್ತು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇನೆ ಇದಕ್ಕಾಗಿ ಸಾರ್ವಜನಿಕ ಸಹಕಾರ ಬೇಕು ಎಂದು ಅಶೋಕ್ ರೈ ಹೇಳಿದ್ದಾರೆ. ಶಾಸಕರು ಕಳೆದ ಮಳೆಗಾಲದಲ್ಲಿ ಪುತ್ತೂರು ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿ ಕಾಟು ಮಾವು ಹಾಗೂ ಹಲಸಿನ ಗಿಡವನ್ನು ನಾಟಿ ಮಾಡಿಸಿದ್ದರು. ರಸ್ತೆ ಬದಿಯಲ್ಲಿರುವ ಕಾಟುಮಾವು, ಹಲಸಿನ ಗಿಡವನ್ನು ಯಾವುದೇ ಕಾರಣಕ್ಕೂ ಕಡಿಯಬಾರದು ಎಂದು ಸೂಚಿಸಿದ್ದರು.