ಬೆಳ್ಳಾರೆ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಸಾಹಿತ್ಯ ಸಂಘದ ಉದ್ಘಾಟನೆ, ಪುಸ್ತಕ ಕೊಡುಗೆ ಮತ್ತು ಉಪನ್ಯಾಸ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು
ಸಹಕಾರಿ ಧುರೀಣರಾದ ಜಾಕೆ ಮಾಧವ ಗೌಡ ಇವರು ನೆರವೇರಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು.ನೆಹರು ಮೆಮೋರಿಯಲ್ ಕಾಲೇಜಿನ ಉಪನ್ಯಾಸಕರಾದ ಪ್ರೊ ಸಂಜೀವ ಕುದ್ಪಾಜೆ ಅರೆಭಾಷೆ ಬೆಳೆದು ಬಂದ ದಾರಿಯ ಕುರಿತು ಉಪನ್ಯಾಸ ನೀಡಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್, ಕಾಲೇಜಿನ ಪ್ರಾಂಶುಪಾಲರಾದ ಬಾಲಸುಬ್ರಹ್ಮಣ್ಯ ಪಿ ಎಸ್, ಐಕ್ಯುಎಸಿ ಸಹ ಸಂಚಾಲಕರು ಹಾಗೂ
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ ರಾಮಚಂದ್ರ ಕೆ ಮಾತನಾಡಿದರು. ಅಕಾಡೆಮಿ ವತಿಯಿಂದ ಕಾಲೇಜಿನ ಗ್ರಂಥಾಲಯಕ್ಕೆ ಅರೆಭಾಷೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.ಅಕಾಡೆಮಿಯ ಸದಸ್ಯರು ಮತ್ತು ಕಾರ್ಯಕ್ರಮ ಸಂಯೋಜಕರಾದ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಗಾನ, ವಂದಿಸಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.
ನೂತನ ಸಮಿತಿ:
ಕಾಲೇಜಿನಲ್ಲಿ ನೂತನವಾಗಿ ರಚನೆಯಾದ ಅರೆಭಾಷೆ ಸಾಹಿತ್ಯ ಸಂಘದ
ಅಧ್ಯಕ್ಷರಾಗಿ ಲಿಖಿನ್ ಎಸ್, ದ್ವಿತೀಯ ಬಿ ಎಸ್ ಡಬ್ಲ್ಯೂ, ಉಪಾಧ್ಯಕ್ಷರಾಗಿ ಪ್ರಿಯಾಂಕಾ ಬಿ ಹೆಚ್, ಪ್ರಥಮ ಬಿ ಎಸ್ ಡಬ್ಲ್ಯೂ, ಕಾರ್ಯದರ್ಶಿಯಾಗಿ ಶ್ರೇಯಾ ಎ ಪಿ, ಸಹ ಕಾರ್ಯದರ್ಶಿಯಾಗಿ ತರುಣ್ ಎಂ ಪ್ರಥಮ ಎಂ ಎಸ್ ಡಬ್ಲ್ಯೂ,ಸದ್ಯಸರಾಗಿ ದಿವ್ಯಾ ಡಿ ಜೆ ಪ್ರಥಮ ಎಂ ಕಾಂ, ಹವ್ಯಶ್ರೀ ಕೆ ಎ ದ್ವಿತೀಯ ಬಿ ಎ, ಗೌಪ್ಯ ದ್ವಿತೀಯ ಬಿ ಕಾಂ, ಹಸ್ತಶ್ರೀ ದ್ವಿತೀಯ ಬಿ ಕಾಂ, ಜನನಿ ಕೆ ಎಂ ದ್ವಿತೀಯ ಬಿ ಎಸ್ ಡಬ್ಲ್ಯೂ, ಗಾನ ಕೆ ಪ್ರಥಮ ಬಿ ಕಾಂ, ನಿಧಿಶ್ರೀ ದ್ವಿತೀಯ ಬಿ ಎ ಆಯ್ಕೆಯಾದರು. ಇವರಿಗೆ ಹೂ ನೀಡಿ ಸ್ವಾಗತಿಸಲಾಯಿತು. ಸಂಘದ ಸಂಚಾಲಕರಾದ ಕಾಂತರಾಜು, ಸುರೇಖಾ ಹೆಚ್ ಮತ್ತು ಮನೋಜ್ ಉಪಸ್ಥಿತರಿದ್ದರು.