ಸುಳ್ಯ : ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಇಂದು ಅಜ್ಜಾವರ, ಅಡ್ಕ, ಮಾವಿನಪಳ್ಳ ಮುಂತಾದ ಕಡೆ ಚುನಾವಣಾ ಪ್ರಚಾರ ನಡೆಸಿದರು. ಮನೆ ಮನೆ ಭೇಟಿ ನೀಡಿ ಪ್ರಚಾರ ಕೈಗೊಂಡರು.ಕಾರ್ನರ್ ಮೀಟಿಂಗ್ ನಡೆಸಿ ಮತ ಯಾಚನೆ ನಡೆಸಿದರು. ಈ ಸಂದರ್ಭದಲ್ಲಿ
ಸುಮಾರು 50 ಕ್ಕೂ ಹೆಚ್ಚು ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಇವರು ಮನೆ ಮನೆ ಪ್ರಚಾರದಲ್ಲಿ ಪ್ರಚಾರದಲ್ಲಿ ಭಾಗವಹಿಸಿದರು.
ಆಮ್ ಅದ್ಮಿ ಮುಖಂಡರಾದ ಗುರುಪ್ರಸಾದ್ ಮೆರ್ಕಜೆ, ಖಲಂದರ್ ಏಲಿಮಲೆ, ಗಣೇಶ್ ಕಂಡಡ್ಕ, ರಾಮಕೃಷ್ಣ ಬೀರಮಂಗಿಲ, ಸಂಶುದ್ದೀನ್ ಕೆ ಎಂ, ವಸಂತ, ಸಿಂಚನ, ಬಶೀರ್, ಹರೀಶ್ ಖಲಂದರ್ ಶಾಫಿ ಮತ್ತಿತರರು ಭಾಗವಹಿಸಿದ್ದರು.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ತಾಲ್ಲೂಕಿನ ವಿವಿಧ ಕಡೆಯಲ್ಲಿ ಕಾರ್ನರ್ ಮೀಟಿಂಗ್ಗಳಲ್ಲಿ ಭಾಗವಹಿಸಿದರು. ಮಡಪ್ಪಾಡಿ, ಎಲಿಮಲೆ, ದುಗ್ಗಲಡ್ಕ, ಸೋಣಂಗೇರಿ ಮುಂದಾದ ಕಡೆ ಚುನಾವಣಾ ಪ್ರಚಾರ ನಡೆಸಿ ಮತ ಯಾಚನೆ ನಡೆಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಗುರುಪ್ರಸಾದ್ ಮೇರ್ಕಜೆ, ಕಲಂದರ್ ಎಲಿಮಲೆ, ವಸಂತ, ಸಂಶುದ್ದೀನ್, ಸಿಂಚನ, ಪುರುಷೋತ್ತಮ, ಸುರೇಶ್ ಮುಂಡಕಜೆ ಮತ್ತಿತರರು ಉಪಸ್ಥಿತರಿದ್ದರು