ಮಂಗಳೂರು: ಯುವ ಸ್ಪಂದನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾಗಿ ಜಿತಿನ್ ಜೀಜೋ ಹಾಗೂ ಉಪಾಧ್ಯಕ್ಷರಾಗಿ ಡಿ.ಎಂ.ದೀಕ್ಷಾ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಜು.12ರಂದು ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ
ಆಯ್ಕೆ ಸಭೆಯಲ್ಲಿ ಈ ಚುನಾವಣಾ ಪ್ರಕ್ರಿಯೆಯು ನಡೆಯಿತು. ರಿಟರ್ನಿಂಗ್ ಅಧಿಕಾರಿಯಾಗಿ ಸಹಕಾರ ಸ್ಪಂದನದ ಲೆಕ್ಕ ಪರಿಶೋಧನಾ ಇಲಾಖೆಯ ಶ್ರೀಯುತ ನವೀನ್ ಎಂ.ಎಸ್. ಇವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.ಯುವ ಸ್ಪಂದನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ಚೇತನ್ ಕೊಟ್ಟಾರಿ ಎಚ್, ಪೃಥ್ವೀಶ್ ಗೌಡ, ಶೆಲ್ಡನ್ ಹರ್ಮನ್ ತಾವ್ರೊ, ಜಿತಿನ್ ಜೀಜೋ, ಮೇಘೇಶ್ ಯು.ಶೆಟ್ಟಿ, ಅನ್ಮೋಲ ಅ.ಬಾಳೇರಿ, ಗುರು ಆದಿತ್ಯ, ನಿಖಿತ್ ಕುಮಾರ್, ನಿಶ್ಮಾ ವಿ.ಕೆ, ನರಸಿಂಹ ಎಸ್.ಭಂಡಾರಿ, ಪೆನಜಾ ರೆಡ್ಡಿ, ಭರತ್ ನಿಡ್ಪಳ್ಳಿ ಮತ್ತು ಡಿ.ಎಂ.ದೀಕ್ಷಾ ಇವರುಗಳು ಅವಿರೋಧವಾಗಿ ಚುನಾಯಿತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.