ಲಾಡೆರ್ಹಿಲ್: 5ನೇ ಟಿ–20 ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿರುದ್ಧ 8 ವಿಕೆಟ್ಗಳಿಂದ ಗೆದ್ದ ವೆಸ್ಟ್ಇಂಡೀಸ್ 3–2ರಿಂದ ಟಿ–20 ಸರಣಿ ಜಯಿಸಿದೆ. ಮೊದಲ ಎರಡು ಪಂದ್ಯಗಳನ್ನು ವೆಸ್ಟ್ ಇಂಡೀಸ್ ಗೆದ್ದಿತ್ತು. 3 ಮತ್ತು 4ನೇ ಪಂದ್ಯಗಳನ್ನು ಜಯಿಸುವ ಮೂಲಕ ಭಾರತ ಸಮಬಲ ಸಾಧಿಸಿತ್ತು. ಆದರೆ, 5ನೇ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ
ಸರಣಿ ಕೈಚೆಲ್ಲಿದೆ. ಭಾರತ ನೀಡಿದ್ದ 166 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 18 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ ಗೆಲುವಿನ ನಗು ಬೀರಿತು. 55 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 85 ರನ್ ಸಿಡಿಸಿದ ಬ್ರ್ಯಾಂಡನ್ ಕಿಂಗ್, 35 ಎಸೆತಗಳಲ್ಲಿ 47 ರನ್ ಸಿಡಿಸಿದ ನಿಕೋಲಸ್ ಪೂರನ್ ಗೆಲುವಿನ ರೂವಾರಿಗಳಾದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಸೂರ್ಯಕುಮಾರ್ ಯಾದವ್ (61; 45ಎ, 4X4, 6X3) ಅವರ ಅರ್ಧಶತಕದ ಬಲದಿಂದ 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 169 ರನ್ ಗಳಿಸಲು ಸಾಧ್ಯವಾಯಿತು.
ತಿಲಕ್ ವರ್ಮಾ 27(18ಎ, 4X3, 6X2), ನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 14 ರನ್ ಗಳಿಸಿದರು.