ಬೆಂಗಳೂರು: ಭಾರಿ ಭೂಕುಸಿತಕ್ಕೆ ತತ್ತರಿಸಿರುವ ಕೇರಳಕ್ಕೆ ಅಗತ್ಯ ನೆರವು ಒದಗಿಸುವುದಾಗಿ ಹಾಗೂ ಸಂತ್ರಸ್ತರಿಗಾಗಿ ನೂರು ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಸಂಬಂಧ
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕೇರಳ ಸರ್ಕಾರದೊಂದಿಗೆ ನಾವು ಇದ್ದೇವೆ. ಅಗತ್ಯ ನೆರವು ಒದಗಿಸುವುದರೊಂದಿಗೆ ಸಂತ್ರಸ್ತರಿಗಾಗಿ 100 ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ನಾವು ಒಟ್ಟಾಗಿ ಅಲ್ಲಿನ ಜನರ ಬದುಕಿನಲ್ಲಿ ಮತ್ತೊಮ್ಮೆ ಭರವಸೆಯ ಆಶಾಕಿರಣವನ್ನು ಮೂಡಿಸೋಣ ಎಂದು ತಿಳಿಸಿದ್ದಾರೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 270ಕ್ಕೂ ಅಧಿಕ ಜನರು ಗಾಯಗೊಂಡರೆ, 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.