ಸುಳ್ಯ: ಕರ್ನಾಟಕ ರಾಜ್ಯ ವಕ್ಫ್ ಆಸ್ತಿಗಳ ಸಂರಕ್ಷಣೆ ಯೋಜನೆ ಅಡಿಯಲ್ಲಿ ಸುಳ್ಯ ತಾಲೂಕು ಮುಹಿದ್ಧೀನ್ ಜುಮಾ ಮಸ್ಜಿದ್ ಗಾಂಧಿನಗರ ಸುಳ್ಯ ಇದರ ಆವರಣಗೋಡೆ ನಿರ್ಮಾಣಕ್ಕಾಗಿ ರೂ.10 ಲಕ್ಷ , ಬದ್ರಿಯ ಜುಮಾ ಮಸೀದಿ ಪೈಚಾರ್ ಇದರ ತಡೆಗೋಡೆ ನಿರ್ಮಾಣಕ್ಕೆ ರೂ 5 ಲಕ್ಷ, ಆಲೆಟ್ಟಿ ಗ್ರಾಮದ
ಕುಂಭಕೋಡು ಜುಮಾ ಮಸೀದಿಯ ಜೀರ್ಣೋದ್ಧಾರಕ್ಕಾಗಿ ರೂ 5 ಲಕ್ಷ, ಅಜ್ಜಾವರ ಮುಹಿದ್ಧೀನ್ ಜುಮಾ ಮಸೀದಿಯ ನವೀಕರಣ ಕಾಮಗಾರಿಗೆ ರೂ 5 ಲಕ್ಷ, ಆಲೆಟ್ಟಿ ಗ್ರಾಮ ಅರಂಬೂರು ಬದರ್ ಮಸೀದಿಯ ನವೀಕರಣಕ್ಕಾಗಿ ರೂ 5 ಲಕ್ಷ ಹಾಗೂ ಸಂಪಾಜೆ ಗಡಿಕಲ್ಲು ಬದ್ರ್ ಜುಮಾ ಮಸೀದಿ ಅಭಿವೃದ್ಧಿ ಕಾಮಗಾರಿಗೆ ರೂ.3 ಲಕ್ಷ ಒಟ್ಟು ತಾಲೂಕಿಗೆ 33 ಲಕ್ಷ ರೂಪಾಯಿ ವಕ್ಫ್ ಅನುದಾನವನ್ನು ವಕ್ಫ್ ಸಚಿವರಾದ ಜಮೀರ್ ಅಹಮ್ಮದ್ ಬಿಡುಗಡೆ ಮಾಡಿದ್ದಾರೆ ಎಂದು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.