ಸುಳ್ಯ:ಕಲಿಯುಗದ ಪ್ರತ್ಯಕ್ಷ ದೈವನೆನಿಸಿದ ಶ್ರೀ ವಯನಾಟ್ ಕುಲವನ್ ಕೋಲ ರೂಪದಲ್ಲಿ ಅವತರಿಸಿ ನೆರೆದ ಸಾವಿರಾರು ಭಕ್ತರನ್ನು ಹರಸಿತು. ನೆರೆದ ಭಕ್ತ ಸಮೂಹ ಭೂಮಿಯಲ್ಲಿ ಅವತರಿಸಿದ ಚೈತನ್ಯ ಮೂರ್ತಿ ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವವನ್ನು ಕಣ್ತುಂಬಿಕೊಂಡು ಕೃತಾರ್ಥರಾದರು. ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕೊಲ ನಡೆಯುವುದರೊಂದಿಗೆ
ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್ ಕುಲವನ್
ದೈವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವಕ್ಕೆ ಭಕ್ತಿ ಸಂಭ್ರಮದ ತೆರೆಯಾಯಿತು. ಮಾ.3ರಿಂದ ಆರಂಭಗೊಂಡು ಮೂರು ದಿನಗಳ ಕಾಲ ವಿವಿಧ ದೈವಗಳು ಕೋಲ ರೂಪದಲ್ಲಿ ವಿಜ್ರಂಭಿಸಿ ಭಕ್ತರನ್ನು ಭಕ್ತಿ ಭಾವದ ಸಂಭ್ರಮದಲ್ಲಿ
ತೇಲಾಡಿಸಿತು.ಮೂರು ಶತಮಾನಗಳ ಬಳಿಕ ನಡೆದ ಉತ್ಸವ ಗ್ರಾಮೀಣ ಭಾಗದಲ್ಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕೇರಳ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರ ಗಡಣವೇ ಆಗಮಿಸಿ ಉತ್ಸವಕ್ಕೆ
ಸಾಕ್ಷಿಯಾದರು.ಮಾ.5ರಂದು ಬೆಳಗ್ಗಿನಿಂದ ಕಾರ್ನೊನ್ ದೈವ, ಕೊರಚ್ಛನ್ ದೈವ, ಅತ್ಯಂತ ವಿಶೇಷವಾದ ಕಂಡನಾರ್ ಕೇಳನ್ ದೈವಗಳು ನಡೆದು ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ನಡೆಯಿತು. ಚೆಂಡೆ ಮೇಳದ ಅಬ್ಬರದ ಮಧ್ಯೆ ವೈಭವೋಪೇತವಾಗಿ ಅಂಗಣ ಪ್ರವೇಶಿಸಿದ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ಮಾಡಿ ಭಕ್ತ ಸಮೂಹವನ್ನು ಹರಸಿತು. ರಾತ್ರಿ ದೈವಂಕಟ್ಟು ಮಹೋತ್ಸವಕ್ಕೆ ಸಮಾಪ್ತಿಯಾಗಿ ಮರ ಪಿಳರ್ಕಲ್ ನಡೆಯುತು. ಕೈವೀದ್ನೊಂದಿಗೆ ಉತ್ಸವಕ್ಕೆ ತೆರೆಯಾಯಿತು.