ನವದೆಹಲಿ: ಕಾಸರಗೋಡು- ತಿರುವನಂತಪುರಂ ಮಧ್ಯೆ ಪ್ರಯಾಣಿಸುವ ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ 11 ರಾಜ್ಯಗಳನ್ನು ಸಂಪರ್ಕಿಸುವ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿಸೆ.24ರಂದು ಚಾಲನೆ ನೀಡಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಏಕಕಾಲಕ್ಕೆ ಚಾಲನೆ
ನೀಡಲಿದ್ದಾರೆ.ಕರ್ನಾಟಕ,ರಾಜಸ್ಥಾನ,ತಮಿಳು ನಾಡು, ತೆಲಂಗಾಣ,ಆಂಧ್ರ ಪ್ರದೇಶ,ಬಿಹಾರ,ಪಶ್ಚಿಮ ಬಂಗಾಳ, ಕೇರಳ,ಒಡಿಶಾ,ಜಾರ್ಖಂಡ್, ಗುಜರಾತ್ ರಾಜ್ಯಗಳನ್ನು ವಂದೇ ಭಾರತ್ ರೈಲುಗಳು ಸಂಪರ್ಕಿಸಲಿದೆ. ಕಾಸರಗೋಡು-ತಿರುವನಂತಪುರ, ಬೆಂಗಳೂರು- ಹೈದರಾಬಾದ್, ಉದಯಪುರ-ಜೈಪುರ,ತಿರುನೆಲ್ವೇಲಿ-ಮದುರೈ-ಚೆನ್ನೈ,ವಿಜಯವಾಡ-ಚೆನ್ನೈ ಪಟ್ನಾ-ಹೌರಾ,
ರೂರ್ಕೆಲಾ-ಭುವನೇಶ್ವರ-ಪುರಿ,ರಾಂಚಿ-ಹೌರಾ,
ಜಾಮ್ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ದೊರೆಯಲಿದೆ. ಸ್ವದೇಶಿ ನಿರ್ಮಿತ ಅಪಘಾತ ತಡೆ ತಂತ್ರಜ್ಞಾನ ‘ಕವಚ’ದಂತಹ ಅತ್ಯಾಧುನಿಕ ಫೀಚರ್ಗಳನ್ನು ಒಳಗೊಂಡಿದೆ. ವಿಶ್ವ ದರ್ಜೆಯ ಸೌಕರ್ಯ, ಆರಾಮದಾಯಕ ಪ್ರಯಾಣ ವಿಶೇಷತೆಯಾಗಿದೆ. ಕಾಸರಗೋಡು-ತಿರುವನಂತಪುರಂ ಮಧ್ಯೆ ಇದು ಎರಡನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇದಾಗಿದೆ.