ಹ್ಯಾಂಗ್ಝೌ: ವರ್ಣ ರಂಜಿತ ಸಮಾರಂಭದಲ್ಲಿ ಏಷ್ಯನ್ ಗೇಮ್ಸ್ಗೆ ಚೀನಾದ ಹ್ಯಾಂಗ್ಝೌನಲ್ಲಿ ಶನಿವಾರ ಸಂಜೆ ಚಾಲನೆ ದೊರೆಯಿತು.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಏಷ್ಯನ್ ಗೇಮ್ಸ್ಗೆ ಚಾಲನೆ ನೀಡಿದರು. 45 ರಾಷ್ಟ್ರಗಳಿಂದ 12,000 ಕ್ಕೂ ಹೆಚ್ಚು ಸ್ಪರ್ಧಿಗಳು
40 ಕ್ರೀಡೆಗಳಲ್ಲಿ ಸ್ಪರ್ಧಿಸಲು ಹ್ಯಾಂಗ್ಝೌ ಗೆ ಆಗಮಿಸಿದ್ದಾರೆ. ಭಾರತದ 655 ಸದಸ್ಯರ ತಂಡ ಗೇಮ್ಸ್ನಲ್ಲಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು. ಇದು ಸ್ಪರ್ಧೆಯ ಇತಿಹಾಸದಲ್ಲಿ ಒಂದು ದೇಶದ ಅತಿದೊಡ್ಡ ತಂಡವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ಸ್ನ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು.