ಗೂನಡ್ಕ: ಗೂನಡ್ಕದ ಬದ್ರಿಯಾ ಜುಮಾ ಮಸೀದಿಗೆ ಒಳಪಟ್ಟಿರುವ ಟಿ.ಎಂ.ಅಬ್ದುಲ್ಲ ಹಾಗೂ ಅವರ ಪುತ್ರ ಟಿ.ಎ.ಇಬ್ರಾಹಿಂ ಕುಟುಂಬಸ್ಥರು ಮತ್ತು ಸಿ.ಎಂ.ಮೂಸಾನ್ ಅವರ ಪತ್ನಿ ಪವಿತ್ರ ಉಮ್ರಾ ಯಾತ್ರೆಯನ್ನು ಕೈಗೊಳ್ಳಲಿದ್ದು, ಇವರನ್ನು ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಗೂನಡ್ಕ ಇದರ ವತಿಯಿಂದ ಬೀಳ್ಕೊಡಲಾಯಿತು. ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮಹಮ್ಮದ್ ಅಲೀ ಸಖಾಫಿ ದುವಾ
ನೆರವೇರಿಸಿದರು, ಅಲ್ ಅಮೀನ್ ಸಂಸ್ಥೆಯ ಗೌರವಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಕೆ.ಅಬೂಸಾಲಿ ಗೂನಡ್ಕರವರು ಉಮ್ರಾ ಯಾತ್ರಿಕರಿಗೆ ಶುಭ ಹಾರೈಸಿದರು. ಈ ಸಂದರ್ಭ ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಸದರ್ ಮುಅಲ್ಲಿಂ ಹಬೀಬ್ ಹಿಮಮಿ, ಜಮಾಅತ್ ಅಧ್ಯಕ್ಷ ಡಿ.ಆರ್.ಅಬ್ದುಲ್ ಖಾದರ್, ಜಮಾಅತಿನ ಮಾಜಿ ಅಧ್ಯಕ್ಷರಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಹಾಜಿ ಅಬ್ದುಲ್ಲ ಕೊಪ್ಪದಕಜೆ, ಜಮಾಅತ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ದರ್ಖಾಸ್, ಅಲ್ ಅಮೀನ್ ಸಂಸ್ಥೆಯ ಉಪಾಧ್ಯಕ್ಷ ಮಹಮ್ಮದ್ ಪೆಲ್ತಡ್ಕ, ಪ್ರಧಾನ ಕಾರ್ಯದರ್ಶಿ ಎ.ಟಿ ಹಸನ್ ದೊಡ್ಡಡ್ಕ, ಖಜಾಂಜಿ ಡಿ.ಎಂ.ಅಬ್ದುಲ್ಲ, ಪ್ರಮುಖರಾದ ಹಾಜಿ ಅಬ್ಬಾಸ್ ಗೂನಡ್ಕ, ಅಬ್ದುಲ್ ಲತೀಫ್ ಸಖಾಫಿ, ಇಬ್ರಾಹಿಂ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕ ಸೇರಿದಂತೆ ಜಮಾಅತ್ ಸಮಿತಿಯ ಪದಾಧಿಕಾರಿಗಳು, ಅಲ್ ಅಮೀನ್ ಸಂಸ್ಥೆಯ ಪದಾಧಿಕಾರಿಗಳು, ಎಸ್.ಎಸ್.ಎಫ್, ಎಸ್.ವೈ.ಎಸ್ ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಗೂನಡ್ಕ ಯುನಿಟ್ ನ ಪದಾಧಿಕಾರಿಗಳು, ಜಮಾಅತಿಗರು ಉಪಸ್ಥಿತರಿದ್ದರು.