ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಧನುರ್ಮಾಸ ದಿನ 1 ದಿನಾಂಕ 2024 ಡಿ.16 ಸೋಮವಾರದಿಂದ 2025 ಜನವರಿ 14ರ ಮಂಗಳವಾರದವರೆಗೆ ಒಂದು ತಿಂಗಳ ಕಾಲ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರಿಗೆ ಧನು ಪೂಜೆ ನಡೆಯಲಿದೆ. ಒಂದು ತಿಂಗಳ ಕಾಲ ಪ್ರತಿ ದಿನ

ಪ್ರಾತಃ ಕಾಲ 5.30ಕ್ಕೆ ಧನು ಪೂಜೆ ನೆರವೇರಲಿದೆ. 5.30ಕ್ಕೆ ಧನು ಪೂಜೆ ಇರುವುದರಿಂದ ಬೆಳಗ್ಗಿನ 8 ಗಂಟೆಯ ಪೂಜೆ ಇರುವುದಿಲ್ಲ. ರುದ್ರಾಭಿಷೇಕ, ಧನು ಪೂಜೆ, ಹಣ್ಣುಕಾಯಿ, ಕುಂಕುಮಾರ್ಚನೆ, ಪಂಚಕಜ್ಜಾಯ ಸೇವೆ ನಡೆಯುವುದು.ಪ್ರತೀ ದಿನ ಬೆಳಗ್ಗಿನ ಫಲಾಹಾರದ ವ್ಯವಸ್ಥೆ ಇರುತ್ತದೆ. ಫಲಹಾರ ನೀಡಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ ಎಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.