ದುಬೈ:ತೆಕ್ಕಿಲ್ ಪ್ರವಾಸಿ ಒಕ್ಕೂಟದ ಸಂಗಮ ದುಬೈ ಇತ್ತಿಹಾದ್ ಗ್ರೌಂಡಿನಲ್ಲಿ ನಡೆಯಿತು. ಯುಎಇಯಲ್ಲಿ ವಾಸ್ತವ್ಯವಿರುವ ಮತ್ತು ಭಾರತದಿಂದ ಬಂದು ನೆಲೆಸಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರ ಒಕ್ಕೂಟದ ಎರಡನೇ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಮೂರು ದಿವಸಗಳ ಕಾಲ ನಡೆಯಿತು. ಸಮಾರೋಪ ಸಮಾರಂಭದಲ್ಲಿ
ಮುಖ್ಯ ಅತಿಥಿಯಾಗಿದ್ದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಅಧ್ಯಕ್ಷರಾದ ಅಜೀಜ್ ಕೊವ್ವಲ್ ಸನ್ಮಾನಿಸಿದರು. ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು,ಸಭಾ ಕಾರ್ಯಕ್ರಮ,ಸಾಧಕರಿಗೆ ಪ್ರಶಸ್ತಿ ಪ್ರಧಾನ, ವಿವಿಧ ಆಟಗಳು, ಹಗ್ಗ ಜಗ್ಗಾಟ, ಯುಎಇಯಲ್ಲಿ ವಾಸ್ತವ್ಯವಿರುವ ತೆಕ್ಕಿಲ್ ಒಕ್ಕೂಟದ ಸದಸ್ಯರ ಎಂಟು ತಂಡಗಳ ಕ್ರಿಕೆಟ್ ಪಂದ್ಯಾಟ ನಡೆಯಿತು. ಕ್ರಿಕೆಟ್ನಲ್ಲಿ ತೆಕ್ಕಿಲ್ ಚಂಗ್ ಬ್ರದರ್ಸ್ ಪ್ರಥಮ, ತೆಕ್ಕಿಲ್ ಯು ಕೆ ರಾಯಲ್ಸ್ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು. ಟಿ ಎಂ ಶಾಹಿದ್ ತೆಕ್ಕಿಲ್ ಬಹುಮಾನ ವಿತರಿಸಿದರು. ಸಂಘಟಕರಾದ ತೆಕ್ಕಿಲ್ ಅಜೀಜ್ ಕೊವ್ವಲ್,ಅಬ್ದುಲ್ ರಹ್ಮಾನ್ ತೆಕ್ಕಿಲ್, ಹಮೀದ್ ಪಟೇಲ್ ತೆಕ್ಕಿಲ್ ಅಜೀಜ್ ಬೆಲಿಂಜಮ್ ತೆಕ್ಕಿಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ರಹೀಮ್ ಪೇರಡ್ಕ,ತೆಕ್ಕಿಲ್ ರಜಾಕ್ ಪೇರಡ್ಕ, ಇಕ್ಬಾಲ್ ಸಂಟ್ಯಾರ್ ಪೇರಡ್ಕ,ಸಮದ್ ಪೇರಡ್ಕ, ಸಿನಾನ್ ಸಂಪಾಜೆ, ರಜಾಕ್ ಗೂನಡ್ಕ, ಆಸೀಫ್ ಇಕ್ಬಾಲ್,ಇಬ್ರಾಹಿಂ ತೆಕ್ಕಿಲ್ ಪೇರಡ್ಕ ಗೂನಡ್ಕ,ಟಿ ಎಂ ತಾಜುದ್ದೀನ್ ತೆಕ್ಕಿಲ್ ಗೂನಡ್ಕ,ಶರೀಫ್ ತೆಕ್ಕಿಲ್ ಗೂನಡ್ಕ,ಟಿ ಎಂ ಶಾಜ್ ತೆಕ್ಕಿಲ್,ರೇಹಾನ ರಹೀಮ್ ಪೇರಡ್ಕ ಮತ್ತಿತರರು ಉಪಸ್ಥಿತರಿದ್ದರು.