ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಮತ್ತು ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ.ಪ್ರಾ. ಶಾಲೆ ಸುಳ್ಯ ಸಹಯೋಗದಲ್ಲಿ ಅ.26 ಮತ್ತು 27ರಂದು ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ‘ಕ್ರೀಡಾ ವಿಕ್ರಮ – 2023’ ಸುಳ್ಯದ ಕೋಡಿಯಾಲಬೈಲು ಮಹಾತ್ಮಗಾಂಧಿ ಮಲ್ನಾಡ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಅ.26ರಂದು ಬೆಳಿಗ್ಗೆ
9.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸುವರು. ಉಬರಡ್ಕ ಮಿತ್ತೂರು ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಸೂಂತೋಡು ಗೌರವ ವಂದನೆ ಸ್ವೀಕರಿಸುವರು. ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ಫಾ.ಆ್ಯಂಟನಿ ಮೈಕಲ್ ಅಧ್ಯಕ್ಷತೆ ವಹಿಸುವರು. ಸುಳ್ಯ ಸೈಂಟ್ ಜೋಸೆಫ್ ಮತ್ತು ಸೈಂಟ್ ಬ್ರಿಜಿಡ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ.ವಿಕ್ಟರ್ ಡಿ’ಸೋಜ ಧ್ವಜಾರೋಹಣ ನೆರವೇರಿಸುವರು. ಸುಳ್ಯ ತಹಶೀಲ್ದಾರ್ ಮಂಜುನಾಥ ಎಂ., ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ., ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಮುಖ್ಯ ಅತಿಥಿಗಳಾಗಿ ಭಾಗವಹಿಸುರು. ಸಮಾರಂಭದಲ್ಲಿ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಕ್ಷ್ಮೀಶ ರೈ ರೆಂಜಾಳ, ಅಂತರಾಷ್ಟ್ರೀಯ ಕ್ರೀಡಾಪಟು ಸಂಶೀರ್ ಜಯನಗರ, ರಾಷ್ಟ್ರೀಯ ಕ್ರೀಡಾಪಟು ಆದರ್ಶ್ ಎಸ್.ಪಿ., ರಾಷ್ಟ್ರೀಯ ಚೆಸ್ ಪಟು ಬ್ರಯಾನ್ ರಾಲ್ಸ್ಟನ್ ಗೋವಿಯಸ್ ಅವರನ್ನು ಸಮ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ.ಸದಸ್ಯ ಡೇವಿಡ್ ಧೀರಾ ಕ್ರಾಸ್ತಾ, ಪ್ರಮುಖರಾದ ದೊಡ್ಡಣ್ಣ ಬರೆಮೇಲು, ಪಿ.ಸಿ.ಜಯರಾಮ, ಅಕ್ಷಯ್ ಕೆ.ಸಿ, ಹರೀಶ್ ರೈ ಉಬರಡ್ಕ, ಮಮತಾ ಕುದ್ಪಾಜೆ, ನವೀನ್ ಮಚಾದೊ ಭಾಗವಹಿಸಲಿದ್ದಾರೆ.
ಬಳಿಕ ಕ್ರೀಡಾ ಕೂಟ ಆರಂಭಗೊಳ್ಳಲಿದೆ.
ಅ.27ರಂದು ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪುತ್ತೂರು ವಲಯ ಶ್ರೇಷ್ಠ ಧರ್ಮಗುರು ಫಾ.ಲೋರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸುವರು. ಉಬರಡ್ಕ ಮಿತ್ತೂರು ಗ್ರಾ.ಪಂ. ಉಪಾಧ್ಯಕ್ಷೆ ಚಿತ್ರ ಕುಮಾರಿ ಪಾಲಡ್ಕ, ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ, ನಿತ್ಯಾನಂದ ಮುಂಡೋಡಿ, ಚಂದ್ರ ಕೋಲ್ಚಾರು, ಸಂದೀಪ್ ಕುತ್ತಮೊಟ್ಟೆ,ನವೀನ್ ಮಚಾದೊ,ಜೂಲಿಯಾನ ಕ್ರಾಸ್ತಾ ಮತ್ತಿತರರು ಭಾಗವಹಿಸಲಿದ್ದಾರೆ. ಸುಮಾರು 800 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.