ಸುಳ್ಯ:ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿವೆ.ಸರಕಾರ ಎಲ್ಲ ಸೌಲಭ್ಯಗಳನ್ನು ನೀಡಿ ಅತ್ಯುತ್ತಮ ಶಿಕ್ಷಣವನ್ನು ನೀಡುತಿದೆ. ಆದರೆ ಎಲ್ಲರೂ ಖಾಸಗೀ ಶಾಲೆಗಳತ್ತ ಒಲವು ತೋರಿಸುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಎದುರಾಗುತಿದೆ. ಮಕ್ಕಳ ಕೊರತೆಯಿಂದ ಮುಂದಿನ 5 ವರ್ಷದಲ್ಲಿ ರಾಜ್ಯದಲ್ಲಿ 10 ಸಾವಿರ ಸರಕಾರಿ ಶಾಲೆಗಳು ಮುಚ್ಚುವ ಆತಂಕ ಇದೆ ಎಂದು
ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುಳ್ಯದ ಅಮರ ಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಣ ನೀತಿಯ ಬಗ್ಗೆ ಎಲ್ಲೆಡೆ ಚರ್ಚೆಯಾಗಬೇಕು. ಶಿಕ್ಷಕರು ಕೂಡ ಈ ಬಗ್ಗೆ ಮಾತನಾಡಬೇಕು ಎಂದ ಅವರು ಜಾತಿ, ಧರ್ಮ ಎಂಬುದಕ್ಕಿಂತ ದೇಶವೇ
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಶ್ರೇಷ್ಠ,ರಾಷ್ಟ್ರ ಭಕ್ತಿ ದೇಶ ಪ್ರೇಮವೇ ದೊಡ್ಡದು ಎಂಬ ಕಲ್ಪನೆ ಇರುವ ವ್ಯಕ್ತಿಗಳನ್ನು ರೂಪಿಸುವ, ಶಿಕ್ಷಣದ ಮೂಲಕ ತನ್ನ ಕಾಲ ಮೇಲೆ ತಾನು ನಿಲ್ಲುವ ವ್ಯಕ್ತಿಗಳನ್ನು ರೂಪಿಸುವ ಹೊಣೆ ಶಿಕ್ಷಕರ ಮೇಲೆ ಇದೆ ಎಂದು ಅವರು ಹೇಳಿದರು. ದ.ಕ.ಜಿಲ್ಲಾ ಮಟ್ಟದ ಅತ್ತುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ 21 ಮಂದಿ ಶಿಕ್ಷಕರಿಗೆ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.